ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪವರ್ ಸ್ಟಾರ್ ಪುನಿತ್ ಅಭಿಮಾನಿಗಳಲ್ಲಿ "ಕ್ಷಮೆ" ಕೇಳಿದ ಚಕ್ರವರ್ತಿ ಸೂಲಿಬೆಲೆ !

ಬೆಂಗಳೂರು: ಚಕ್ರವರ್ತಿ ಸೂಲಿಬೆಲೆ ಮಾತಿಗೆ ಭಾರೀ ಫೇಮಸ್. ಆದರೆ, ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನ ಟೀಕಿಸೋ ಭರದಲ್ಲಿ ಪರೋಕ್ಷವಾಗಿಯೇ ಪವರ್ ಸ್ಟಾರ್ ಪುನೀತ್ ಅವರ ಹೆಸರನ್ನೂ ತೆಗೆದುಕೊಂಡು ಅಪ್ಪು ಫ್ಯಾನ್ಸ್ ಕೆಂಗಣ್ಣಿಗೆ ಗುರಿ ಆಗಿದ್ದಾರೆ.

ಹೌದು.ಬಸವರಾಜ್ ಬೊಮ್ಮಾಯಿ ಅವರಿಗೆ ಸಹಿ ಹಾಕಲೂ ಟೈಮ್ ಸಾಲುತ್ತಿಲ್ಲ ಎಂದು ಶಾಸಕರು ದೂರುತ್ತಿದ್ದಾರೆ. ಪಾಪ ಸಿಎಂ ಅವರಿಗೆ ಟೈಮೇ ಸಾಲುತ್ತಿಲ್ಲ. ಆದರೆ ಪ್ರಿಮಿಯರ್ ಶೋದಲ್ಲಿ ಚಿತ್ರ ನೋಡಿ ಕಣ್ಣೀರು ಹಾಕಲು ಸಾಧ್ಯವಾಗುತ್ತದೆ. ಚಿತ್ರರಂಗದ ಹೀರೋ ಸತ್ತಾಗ ಅವರಿಗಾಗಿಯೇ ಮೂರು ದಿನ ವ್ಯಯಿಸಲು ಸಾಧ್ಯವಾಗುತ್ತದೆ ಎಂದು ಅಪ್ಪು ಬಗ್ಗೆ ಚಕ್ರವರ್ತಿ ಸೂಲಿಬೆಲೆ ಟ್ವಿಟರ್ ಮಾಡಿಯೇ ಬಿಟ್ಟಿದ್ದರು.

ಆದರೆ, ಚಕ್ರವರ್ತಿ ಸೂಲಿಬೆಲೆ ಅವರ ಈ ಒಂದು ಟ್ವಿಟರ್ ಗೆ ಅಪ್ಪು ಫ್ಯಾನ್ಸ್ ಕೆಂಡಾಮಂಡಲವಾಗಿದ್ದರು. ಇದನ್ನ ಅರಿತ ಚಕ್ರವರ್ತಿ ಸೂಲಿಬೆಲೆ, ಮತ್ತೊಂದು ಟ್ವಿಟ್ ಹೀಗೆ ಮಾಡಿಯೇ ಬಿಟ್ಟರು.

"ಈ ಟ್ವೀಟ್ ಪುನೀತ್ ಅವರನ್ನು ಅಗೌರವಿಸಿದ್ದು ಎಂದು ಅನೇಕರು ಭಾವಿಸಿದ್ದಾರೆ. ನಾನು ಕ್ಷಮೆ ಯಾಚಿಸುತ್ತೇನೆ. ಅವರ ಬಗ್ಗೆ ನನಗೆ ಅಪಾರವಾದ ಗೌರವವಿದೆ. ದಯವಿಟ್ಟು ಈ ಟ್ವೀಟನ್ನು ಅನ್ಯಥಾ ಭಾವಿಸಬೇಡಿ. ಅಭಿಮಾನಿಗಳಿಗೆ ನೋವಾಗಿದ್ದರೆ ನಿಸ್ಸಂಶಯವಾಗಿ ಕ್ಷಮೆ ಯಾಚಿಸುತ್ತೇನೆ. ಪುನೀತ್ ಅವರ ಅಭಿಮಾನಿಯಾಗಿ ಇದು ನನ್ನ ಕರ್ತವ್ಯವೂ ಹೌದು.

ಚಕ್ರವರ್ತಿ ಸೂಲಿಬೆಲೆ ಹೀಗೆ ಟ್ವಿಟರ್ ನಲ್ಲಿ ಬರೆದುಕೊಂಡು ಅಪ್ಪು ಅಭಿಮಾನಿಗಳಲ್ಲಿ ಸಾರಿ ಕೇಳಿದ್ದಾರೆ.

Edited By :
PublicNext

PublicNext

01/08/2022 09:08 pm

Cinque Terre

197.74 K

Cinque Terre

9