ಗುಜರಾತ್ ಸರ್ಕಾರ 2022-23 ನೇ ಸಾಲಿನ 6 ರಿಂದ 12 ನೇ ತರಗತಿಯ ಶೈಕ್ಷಣಿಕ ಪಠ್ಯ ಕ್ರಮದಲ್ಲಿ ಭಗವದ್ಗೀತೆಯ ತರುತ್ತಿದೆ. ಈಗಾಗಲೇ ಈ ಬಗ್ಗೆ ನಿರ್ಧಾರ ಕೂಡ ಆಗಿದ್ದು , ವಿಧಾನಸಭೆಯಲ್ಲಿ ಗುರುವಾರ ಈ ವಿಚಾರವನ್ನ ಸರ್ಕಾರ ಘೋಷಿಸಿದೆ.
ವಿಧಾನಸಭೆಯಲ್ಲಿ ಶೈಕ್ಷಣಿಕ ಬಜೆಟ್ ಹಂಚಿಕ ವೇಳೆ ಶಿಕ್ಷಣ ಸಚಿವ ಜಿತು ವಘಾನಿ ಈ ವಿಷಯವನ್ನ ಘೋಷಿಸಿದ್ದಾರೆ. ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆ ಮೌಲ್ಯ ಮತ್ತು ತತ್ವಗಳನ್ನೇ ಪರಿಚಯಿಸುವೇ ಈ ನಿರ್ಧಾರದ ಹಿಂದಿನ ಉದ್ದೇಶವಾಗಿದೆ. ಕೇಂದ್ರದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅನುಗುಣವಾಗಿಯೇ ಇದು ಇದೆ ಅಂತಲೇ ಶಿಕ್ಷಣ ಸಚಿವ ಜಿತು ವಘಾನಿ ಹೇಳಿದ್ದಾರೆ.
PublicNext
17/03/2022 09:43 pm