ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಗಡಿಭಾಗದಲ್ಲಿ ಕನ್ನಡ ಭಾಷಾ ಪ್ರಯೋಗಾಲಯ ಸ್ಥಾಪನೆ; ನಾಗಾಭರಣ ಘೋಷಣೆ

ವರದಿ: ಸಂತೋಷ ಬಡಕಂಬಿ

ಬೆಳಗಾವಿ: ಕರ್ನಾಟಕ ರಾಜ್ಯದ ಗಡಿ ಜಿಲ್ಲೆಗಳಲ್ಲಿ ಕನ್ನಡ ಭಾಷಾ ಪ್ರಯೋಗಾಲಯಗಳನ್ನು ಸ್ಥಾಪಿಸುವ ಮೂಲಕ ಗಡಿಯಲ್ಲಿ ಕನ್ನಡವನ್ನು ಮತ್ತಷ್ಟು ಗಟ್ಟಿ ಮಾಡುವ ಕೆಲಸ ಮಾಡುತ್ತೇವೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ತಿಳಿಸಿದ್ದಾರೆ.

ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಮತ್ತು ಜಿಲ್ಲಾ ಮತ್ತು ಮಹಾನಗರ ಪಾಲಿಕೆ ಮತ್ತು ಕನ್ನಡ ಜಾಗೃತಿ ಸಮಿತಿ ಸಂಯುಕ್ತ ಆಶ್ರಯದಲ್ಲಿ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ "ಕನ್ನಡ ನುಡಿ- ನಡೆ ಕಾಯಕ" ಸಮಾರೋಪ ಸಮಾರಂಭ ಉದ್ಘಾಟಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು.

ಗಡಿ ಜಿಲ್ಲೆಗಳಲ್ಲಿ ಪ್ರಾಥಮಿಕ ಶಾಲೆ ಮಕ್ಕಳಿಗೆ ಮನೆಯ ಭಾಷೆ ಬೇರೆ ಇರುತ್ತದೆ. ಶಾಲೆಯ ಭಾಷೆ ಇರುತ್ತದೆ. ಉದಾಹರಣೆಗೆ ಬೆಳಗಾವಿಯಲ್ಲಿ ಮರಾಠಿ-ಕನ್ನಡ, ಬಳ್ಳಾರಿಯಲ್ಲಿ ತೆಲುಗು-ಕನ್ನಡ, ಹೈದರಾಬಾದ್ ಕರ್ನಾಟಕದಲ್ಲಿ ತೆಲುಗು-ಕನ್ನಡ, ಹೊಸೂರು ಮತ್ತು ಚಾಮರಾಜನಗರದಲ್ಲಿ ತಮಿಳು-ಕನ್ನಡ ಭಾಷೆ ಇದೆ. ಇದನ್ನು ಗಮನಿಸಿದಾಗ ಆ ಮಕ್ಕಳಿಗೆ ಕನ್ನಡ ಕಲಿಯಲು ಸಾಕಷ್ಟು ಗೊಂದಲ ಆಗುತ್ತದೆ.

ಈ ಗೊಂದಲ ನಿವಾರಿಸುವ ಬಗ್ಗೆ ಶಿಕ್ಷಕರಿಗೆ ತರಬೇತಿ ನೀಡಿ, ಸ್ಮಾರ್ಟ್ ಕ್ಲಾಸ್‍ಗಳನ್ನು ಸಿದ್ಧ ಪಡಿಸಿ ಆಡಿಯೋ, ವೀಡಿಯೊ ಪಠ್ಯಗಳನ್ನು ಅವರಿಗೆ ದೊರಕಿಸಿ ಕೊಟ್ಟು, ಒಂದನೇ ತರಗತಿಯಿಂದ ಎಂಟನೇ ತರಗತಿವರೆಗೆ ಆ ರೀತಿಯ ಪಠ್ಯಗಳನ್ನು ಸಿದ್ಧ ಮಾಡಿಕೊಡುವುದು ಭಾಷಾ ಪ್ರಯೋಗಾಲಯಗಳ ಮುಖ್ಯ ಉದ್ದೇಶ ಎಂದರು.

Edited By : Nagesh Gaonkar
PublicNext

PublicNext

17/07/2022 10:07 pm

Cinque Terre

128.73 K

Cinque Terre

5

ಸಂಬಂಧಿತ ಸುದ್ದಿ