ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಬಾಡಿಗೆ ಭಾಷಣಕಾರನ ಪಠ್ಯ ನಮಗೆ ಬೇಡ': ಬಿ.ಕೆ ಹರಿಪ್ರಸಾದ್ ಕಿಡಿ

ಬೆಂಗಳೂರು: ರಾಜ್ಯದಲ್ಲಿ ಸದ್ಯ ಪಠ್ಯ ಪುಸ್ತಕ ವಿವಾದ ಭುಗಿಲೆದ್ದಿದೆ. ಶಾಲಾ ಮಕ್ಕಳ ಬೌದ್ಧಿಕ ವಿಕಾಸಕ್ಕೆ ಪೂರಕವಾಗಿ ಇರಬೇಕಾದ ಪಠ್ಯವನ್ನು ಕೇಸರಿಕರಣ ಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್, 'ಬಾಡಿಗೆ ಭಾಷಣಕಾರನ ಪಠ್ಯ ನಮಗೆ ಬೇಡ ಎಂದು ಕಿಡಿಕಾರಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆಯನ್ನು ಖಂಡಿಸಿದ್ದಾರೆ. 'ಬಿಜೆಪಿ ಹಾಗೂ ಸಂಘಪರಿವಾರದ ಬೌದ್ಧಿಕ ದಿವಾಳಿತನ ಈ ಮಟ್ಟಕ್ಕೆ ಇಳಿಬಾರದಾಗಿತ್ತು. ಸುಳ್ಳಿನ ಕಂತೆಗಳನ್ನ ಪೋಣಿಸುವ ಹೆಂಗ್ ಪುಂಗ್ಲಿ ಖ್ಯಾತಿಯ ಬಾಡಿಗೆ ಭಾಷಣಕಾರನಂತಹ "ವಾಗ್ಮಿ"ಯನ್ನ ನೋಡೇ ಇಲ್ವಂತೆ. ಜಗದೀಶ್ ಶೆಟ್ಟರ್ ಅವರೇ ನಿಮ್ಮ "ಚಿಂತಕ"ನ ಬಗ್ಗೆ ಮಾಜಿ ಸಿಎಂ ಡಿ.ವಿ ಸದಾನಂದ ಗೌಡರ ಬಳಿ ಮಾರ್ಗದರ್ಶನ ಪಡೆಯುವುದು ಒಳ್ಳೆಯದು ಎಂದಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ “ವಾಗ್ಮಿ, ಚಿಂತಕ ಚಕ್ರವರ್ತಿ ಸೂಲಿಬೆಲೆಯವರ ಹಿಂದೂಪರ ಚಿಂತನೆಗಳನ್ನು ಶಾಲಾ ಪಠ್ಯ ಪುಸ್ತಕಗಳಲ್ಲಿ ಅಳವಡಿಸಿದರೆ” ತಪ್ಪೇನು ಎಂದು ಪ್ರಶ್ನಿಸಿದ್ದರು. ಅಲ್ಲದೆ ಟಿಪ್ಪು ಒಬ್ಬ ನರಭಕ್ಷಕ ಎಂದು ಸಹ ಹೇಳಿಕೆ ನೀಡಿದ್ದರು. ಅವರ ಈ ಹೇಳಿಕೆಗೆ ತಿರುಗೇಟು ನೀಡಿದ ಬಿ.ಕೆ ಹರಿಪ್ರಸಾದ್, “ಜಗದೀಶ್ ಶೆಟ್ಟರ್‌ ಟಿಪ್ಪುವಿನ ಪೋಷಾಕು ಧರಿಸಿ ಪೋಸು ನೀಡಿದ್ದನ್ನ ಮರೆತಿರಬೇಕು. ಚಿತ್ರಗಳು ಬರೀ ಮಾತಾಡುವುದಿಲ್ಲ ಶೆಟ್ಟರ್ ಅವರೇ, ಸತ್ಯವನ್ನ ಬೆತ್ತಲೆ ಕೂಡ ಮಾಡುತ್ತೆ. ಕೋಮುವಾದದ ಕನ್ನಡಕ ಕಳಚಿಟ್ಟು ಓದುವುದಾದರೇ ತಾವೇ ಸಿಎಂ ಆಗಿದ್ದಾಗ ಪ್ರಕಟಿಸಿರುವ ಪುಸ್ತಕ ಕಳಿಸಿ‌ಕೊಡಬೇಕಾ?” ಎಂದು ಶೆಟ್ಟರ್ ಟಿಪ್ಪುವಿನ ವೇಶ ಧರಿಸಿದ್ದ ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ.

Edited By : Nagaraj Tulugeri
PublicNext

PublicNext

23/05/2022 04:15 pm

Cinque Terre

44.09 K

Cinque Terre

14

ಸಂಬಂಧಿತ ಸುದ್ದಿ