ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಿಯು ಕಾಲೇಜು ಬೋಧಕರ ನೇಮಕಾತಿ ಆದೇಶ ತಡೆಗೆ ಕಾರಣ ತಿಳಿಸಿ ಅಭಯ ನೀಡಿದ ಬಿಎಸ್‌ವೈ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಪಿಯು ಕಾಲೇಜು ಬೋಧಕರ ನೇಮಕಾತಿ ಆದೇಶ ತಡೆಗೆ ಕಾರಣ ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಪದವಿಪೂರ್ವ ಕಾಲೇಜು ಬೋಧಕರ ಆಯ್ಕೆ ಬಗ್ಗೆ ಈಗಾಗಲೇ ನೇಮಕಾತಿ ಪ್ರಕ್ರಿಯೆ ಮತ್ತು ಕೌನ್ಸಲಿಂಗ್ ನಡೆದು ಸ್ಥಳಗಳನ್ನು ನಿಗದಿಪಡಿಸಲಾಗಿದೆ. ಆದರೆ ಕೋವಿಡ್-19 ಪರಿಸ್ಥಿತಿಗಳ ಹಿನ್ನಲೆಯಲ್ಲಿ ಇನ್ನೂ ಕಾಲೇಜುಗಳು ಆರಂಭವಾಗದೆ ಇರುವುದರಿಂದ ಬೋಧಕರಿಗೆ ವರದಿ ಮಾಡಿಕೊಳ್ಳುವುದಕ್ಕೆ ತೊಂದರೆ ಆಗುತ್ತಿರುವುದು ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ, ಬೋಧಕರಿಗೆ ಅನುಕೂಲವಾಗುವಂತೆ ಈ ಹಿಂದೆ ಇದ್ದ ಒಂದು ವರ್ಷದೊಳಗೆ ನೇಮಕಾತಿ ಅವಧಿಯ ಊರ್ಜಿತ್ವವನ್ನು, ನೇಮಕಾತಿ ಆಗುವವರೆಗೆ ಮುಂದುವರಿಸಲಾಗುವುದು. ಆದ್ದರಿಂದ ಬೋಧಕರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.

Edited By : Vijay Kumar
PublicNext

PublicNext

13/10/2020 03:48 pm

Cinque Terre

63.25 K

Cinque Terre

0

ಸಂಬಂಧಿತ ಸುದ್ದಿ