ಮೈಸೂರು : ಡಿ.ಕೆ.ಶಿವಕುಮಾರ್ ಅವರ ಮನೆ ಮೇಲೆ ಇಂದು ಬೆಳಿಗ್ಗೆ ಸಿಬಿಐ ದಾಳಿ ರಾಜಕೀಯ ಪ್ರೇರಿತ ಎಂಬ ಕಾಂಗ್ರೆಸ್ ನ ನಾಯಕರ ಆರೋಪಕ್ಕೆ ಸಚಿವ ಸುಧಾಕರ್ ತಿರುಗೇಟು ನೀಡಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗಿಂತ ಡಿ.ಕೆ.ಶಿವಕುಮಾರ್ ದೊಡ್ಡ ನಾಯಕ ಅಲ್ಲ. ರಾಜಕೀಯ ಪ್ರೇರಿತ ದಾಳಿ ಆಗಿದ್ದರೆ ಸಿದ್ದರಾಮಯ್ಯವರನ್ನು ಟಾರ್ಗೆಟ್ ಮಾಡಬೇಕಿತ್ತು ಅಲ್ವಾ ಎಂದು ಸಚಿವ ಡಾ.ಕೆ.ಸುಧಾಕರ್ ಪ್ರಶ್ನೆ ಮಾಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನಿಖೆ ಮೂಲಕ ಸತ್ಯಾಂಶ ಹೊರಬೀಳಲಿ.
ಇದು ಡಿ.ಕೆ.ಶಿವಕುಮಾರ್ ಅವರು ಪರಿಶುದ್ಧ ಎಂಬುದನ್ನ ಸಾಬೀತುಪಡಿಸಲು ಅವಕಾಶ ಎಂದರು.
PublicNext
05/10/2020 03:03 pm