ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊರಟಗೆರೆ : ಜಾತ್ರೆಯಲ್ಲಿ ಮಹಿಳೆಯರಿಗೆ ಬಳೆ ಉಡುಗೊರೆ ನೀಡಿ ಸಂಭ್ರಮ ಪಟ್ಟ ಪರಮೇಶ್ವರ್

ಕೊರಟಗೆರೆ : ನಾನು ನಿಮ್ಮ ಸಹೋದರ.... ನಾನು ನಿಮ್ಮಮಗ... ನೀವು ಜಾತ್ರೆಗೆ ಬಂದಿದ್ದೀರಾ... ನಾನು ನಿಮಗೆ ಬಳೆ ಕೊಡಿಸುತ್ತೇನೆ ಎಲ್ಲರಿಗೂ ತಿಳಿಸಿ ...ಎಲ್ಲರ ಹಣ ನಾನು ಕೊಡುತ್ತೇನೆ... ಇದು ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ್ ಹೇಳಿದ ಮಾತುಗಳು...

ತುಮಕೂರು ಜಿಲ್ಲೆಯ ಕೊರಟಗೆರೆ ಚೆನ್ನರಾಯದ ದುರ್ಗ ಹೋಬಳಿಯ ಜೆಟ್ಟಿ ಅಗ್ರಹಾರ ಗ್ರಾಮದಲ್ಲಿ ಮಂಗಳವಾರ ನಡೆದ ಬೇವಿಳ್ಳಮ್ಮ ಜಲದಿ ಮತ್ತು ಜಾತ್ರಾಮಹೋತ್ಸವಲ್ಲಿ ಭಾಗಿಯಾಗಿದ್ದ ಮಾಜಿ, ಡಿಸಿಎಂ ಹಾಗೂ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಜಿ ಪರಮೇಶ್ವರ್ ಪಾಲ್ಗೊಂಡು ಜಾತ್ರೆಯಲ್ಲಿ ನೆರೆದಿದ್ದ ಮಹಿಳೆಯರಿಗೆ ಮತ್ತು ಯುವತಿಯರಿಗೆ ಬಳೆ ತೊಡಿಸಿ ಆತ್ಮೀಯತೆ ಮೆರೆದರು.

ನಾನು ನಿಮ್ಮ ಸಹೋದರ, ನಾನು ನಿಮ್ಮ ಮಗ ಎಲ್ಲರೂ ಬಳೆ ತೊಡಿಸಿಕೊಳ್ಳಿ ಎನ್ನುವ ಮೂಲಕ ಎಲ್ಲಾ ಮಹಿಳೆಯರಿಗೆ ಬಳೆಯನ್ನು ನಾವೇ ತೊಡಿಸಿದರು....ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.. ಪರಮೇಶ್ವರ್ ಈ ನಡೆಗೆ ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ..

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಅರೆಕೆರೆ ಶಂಕರ್, ಅಶ್ವಥನಾರಾಯಣ, ಮಹಿಳಾ ಮುಖಂಡರಾದ ಮಂಜುಳಾ ಶಂಭುಲಿಂಗಾರಾಧ್ಯ, ಪಿಡಿಒ ಮಂಜುಳಾ ಸೇರಿದಂತೆ ಗ್ರಾ.ಪಂ ಸದಸ್ಯರು, ಸ್ಥಳೀಯ ಗ್ರಾಮಸ್ಥರು ಇದ್ದರು.ಮಾಜಿ ಡಿಸಿಎಂ ಜಿ ಪರಮೇಶ್ವರ್... ಕೊರಟಗೆರೆ ತಾಲೂಕಿನ ಜಟ್ಟಿ ಅಗ್ರಹಾರ ಗ್ರಾಮದಲ್ಲಿ ನಡೆದಂತಹ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು.... ತಮ್ಮ ಬಾಲ್ಯದ ನೆನಪುಗಳನ್ನು ನೆನಪು ಮಾಡಿಕೊಂಡು ಜಾತ್ರೆಯಲ್ಲಿ ಕಡಲೆ ಪುರಿ... ಕಲ್ಯಾಣ ಶಾವಿಗೆ... ಬತಾಸು.. ಸೇರಿದಂತೆ ಇತರೆ ವಸ್ತುಗಳನ್ನು ಖರೀದಿಸಿ.. ಜಾತ್ರೆಯಲ್ಲಿ ಕಡಲೆಪುರಿ ಸೇರಿದಂತೆ ಇತರೆ ವಸ್ತುಗಳನ್ನು ರುಚಿ ನೋಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Edited By : Nagesh Gaonkar
PublicNext

PublicNext

06/07/2022 08:18 pm

Cinque Terre

56.98 K

Cinque Terre

2

ಸಂಬಂಧಿತ ಸುದ್ದಿ