ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟ್ರ್ಯಾಕ್ಟರ್ ಓಡಿಸಿದ ರೇಣುಕಾಚಾರ್ಯ, ಸವಾರಿ ಮಾಡಿದ ಅಧಿಕಾರಿಗಳು...!

ದಾವಣಗೆರೆ: ಹೊನ್ನಾಳಿ ತಾಲೂಕಿನ ಹಿರೇಗೋಣಿಗೆರೆ ಗ್ರಾಮದಲ್ಲಿ ಹಮ್ಮಿಕೊಂಡಿರುವ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದೆ. ಈ ವೇಳೆ ಶಾಸಕ ಎಂ.ಪಿ ರೇಣುಕಾಚಾರ್ಯ ಟ್ರ್ಯಾಕ್ಟರ್ ಚಾಲನೆ ಮಾಡಿದರೆ ಜಿಲ್ಲಾಧಿಕಾರಿಗಳು ಅವರ ಪಕ್ಕದಲ್ಲಿ ಕುಳಿತು ಆಗಮಿಸಿದ್ದು ವಿಶೇಷವಾಗಿತ್ತು.

'ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ' ಕಾರ್ಯಕ್ರಮಕ್ಕೆ ಚಾಲನೆ ನೀಡಿದ ರೇಣುಕಾಚಾರ್ಯ ಅವರು ಅಧಿಕಾರಿಗಳನ್ನು ಹೊತ್ತ ಟ್ರ್ಯಾಕ್ಟರ್ ಚಲಾಯಿಸುವ ಮೂಲಕ ಗಮನ ಸೆಳೆದರು. ಜಿಲ್ಲಾಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಗ್ರಾಮದಲ್ಲಿ ಭಾಗಿಯಾದರು. ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ಗಮನ ಸೆಳೆದವು.

ಅಧಿಕಾರಿಗಳು ಹಾಗೂ ಶಾಸಕರನ್ನು ಆತ್ಮೀಯವಾಗಿ ಬರಮಾಡಿಕೊಂಡ ಗ್ರಾಮಸ್ಥರು ತಮ್ಮ ಕಷ್ಟಗಳನ್ನು ಹೇಳಿಕೊಂಡರು. ಈ ವೇಳೆ ಜಿಲ್ಲಾಧಿಕಾರಿ ಮಹಾಂತೇಶ್ ಆರ್.ಬೀಳಗಿ ಅವರು ವೃದ್ಧೆಯವರ ಬಳಿ ತೆರಳಿ ವೃದ್ಧಾಪ್ಯ ವೇತನ ಬರುತ್ತಾ? ಹಣ ಬರುತ್ತಿದೆಯಾ ಇಲ್ವೋ, ರೇಷನ್ ಸಿಗುತ್ತಿದೆಯೋ ಇಲ್ವೋ ಎಂದು ವಿಚಾರಿಸಿದರು. ಇದಕ್ಕೆ ವೃದ್ಧೆಯರು ಬರುತ್ತಿದೆ ಎಂದರು. ಈ ಹಣ ಏನ್ ಮಾಡ್ತೀಯಾ ಎಂದು ಡಿಸಿ ಕೇಳಿದಾಗ ತಿನ್ನುತ್ತೇನೆ ಎಂಬ ವೃದ್ಧೆ ಉತ್ತರಕ್ಕೆ ಎಲ್ಲರೂ ನಗೆಗಡಲಲ್ಲಿ ತೇಲಿದರು.

Edited By : Nagesh Gaonkar
PublicNext

PublicNext

27/05/2022 03:51 pm

Cinque Terre

42.14 K

Cinque Terre

0

ಸಂಬಂಧಿತ ಸುದ್ದಿ