ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟನೆಗಾಗಿ ವಾರಣಾಸಿಗೆ ಬಂದಿರುವ ಪ್ರಧಾನಿ ನರೇದ್ರ ಮೋದಿಯವರಿಗೆ ಸ್ಥಳೀಯರು ಹೂವಿನ ಮಳೆಯನ್ನೇ ಸುರಿಸಿದ್ರು. ವಾರಣಾಸಿಯ ರಸ್ತೆಯಲ್ಲಿ ಸಾಗುತ್ತಿದ್ದ ಮೋದಿ ಅವರ ಕಾರಿನ ಮೇಲೆ ಹೂವನ್ನು ಹಾಕುತ್ತಾ ಘೋಷಣೆ ಕೂಗಿದ್ರು. ಮೋದಿ ಮೋದಿ.. ಹರ ಹರ ಮಹದೇವ್ ಅಂತ ಘೋಷಣೆ ಕೂಗಿದ್ರು. ಹಾಗೇ ಮೋದಿಗೆ ಸ್ಥಳೀಯರು ಪೇಟ ಹಾಗೂ ಶಾಲು ಹಾಕಲು ಮುಗಿಬಿದ್ದಾಗ ಸೆಕ್ಯೂರಿಟಿ ಅವರನ್ನ ತಡೆಯಲು ಮುಂದಾದ್ರು. ಇದನ್ನ ಗಮನಿಸಿದ ಮೋದಿ ಕಾರ್‌ನ ನಿಲ್ಲಿಸಿ ಸ್ಥಳೀಯರಿಂದ ಪೇಟ ಹಾಗೂ ಶಾಲು ತೊಡಿಸಿಕೊಂಡು ಜನರತ್ತ ಕೈಮುಗಿದು ಅಲ್ಲಿಂದ ಹೊರಟರು. ಜನಸಾಮಾನ್ಯರ ಭಾವನೆಗೆ ಮಿಡಿದ ಮೋದಿಯ ಈ ನಡೆಗೆ ಭಾರೀ ಮೆಚ್ಚುಗೆಯೂ ವ್ಯಕ್ತವಾಗಿದೆ.
PublicNext
13/12/2021 12:52 pm