ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೀಪ ಹಚ್ಚಿ ದೀಪಾವಳಿ ಆಚರಿಸಿದ ಯು.ಎಸ್‌ ಅಧ್ಯಕ್ಷ ಜೋ ಬಿಡನ್,600 ಭಾರತೀಯ ಅಮೆರಿಕನ್ ಕಾಂಗ್ರೆಸ್ಸಿಗರು ಭಾಗಿ

ಯು.ಎಸ್‌ ಅಧ್ಯಕ್ಷ ಜೋ ಬಿಡನ್ ಸೋಮವಾರ ವೈಟ್‌ ಹೌಸ್‌ ನಲ್ಲಿ ದೀಪ ಬೆಳಗಿಸಿ 600 ಭಾರತೀಯ ಅಮೆರಿಕನ್ ಕಾಂಗ್ರೆಸ್ಸಿಗರು ಹಾಗೂ ಹಲವು ಗಣ್ಯ ವ್ಯಕ್ತಿಗಳ ಜೊತೆ ದೀಪಾವಳಿ ಆಚರಣೆ ಮಾಡಿದರು.ಈ ವೇಳೆ ಮಾತನಾಡಿದ ಬಿಡನ್‌, ಭಾರತೀಯರೊಂದಿಗೆ ಶ್ವೇತ ಭವನದಲ್ಲಿ ದೀಪಾವಳಿ ಆಚರಣೆ ಮಾಡುವುದು ಗೌರವದ ವಿಷಯವಾಗಿದ್ದು,ಈ ಕಾರ್ಯಕ್ರಮದಲ್ಲಿ ಕಮಲಾ ಹ್ಯಾರಿಸ್‌, ಡಾ. ಮೂರ್ತಿ ಭಾಗವಹಿಸಿದ್ದರು. ಇಲ್ಲಿನ ಆಡಳಿತದಲ್ಲಿ ನಾನು ಬದ್ಧತೆಯನ್ನು ಕಾಪಾಡಿಕೊಂಡಿರುವ ಬಗ್ಗೆ ಹೆಮ್ಮೆ ಇರುವುದಾಗಿ ತಿಳಿಸಿದರು.ಬಿಡೆನ್‌ ಭಾಷಣದ ಮೊದಲು ವೈಸ್ ಅಡ್ಮಿರಲ್ ವಿವೇಕ್ ಎಚ್. ಮೂರ್ತಿ, ಭಾರತೀಯ ಅಮೆರಿಕನ್ ಯುವ ಕಾರ್ಯಕರ್ತೆ ಶ್ರುಸ್ತಿ ಅಮುಲಾ,ಯುಎಸ್ ಸರ್ಜನ್ ಜನರಲ್ ಮಾತನಾಡಿದರು. ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ರೆಕಾರ್ಡ್ ಮಾಡಿದ ವೀಡಿಯೊ ಸಂದೇಶವನ್ನು ನೌಕಾಪಡೆ ಅಧಿಕಾರಿ ಮತ್ತು ನಾಸಾ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಕಳುಹಿಸಿದ್ದರು.ಒಟ್ಟಿನಲ್ಲಿ ಶ್ವೇತ ಭವನದಲ್ಲಿ ಅದ್ದೂರಿಯ ದೀಪಾವಳಿ ಸಂಭ್ರಮಾಚರಣೆ ನಡೆಯಿತು.

Edited By : Suman K
PublicNext

PublicNext

31/10/2024 06:07 pm

Cinque Terre

59.16 K

Cinque Terre

3