ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಬಿಜೆಪಿ ಕಾರ್ಯಕರ್ತನಿಗೆ ಸ್ವಪಕ್ಷೀಯರಿಂದಲೇ ನಡುರಸ್ತೆಯಲ್ಲಿ ಗೂಸಾ

ತುಮಕೂರು: ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಬಿಜೆಪಿ ಪಾಳಯದಲ್ಲಿ ಭಿನ್ನಮತ ಭುಗಿಲೆದ್ದಿದ್ದು, ಬಿಜೆಪಿ ಮಂಡಲಾಧ್ಯಕ್ಷ ಪವನ್ ಹಾಗೂ ಇತರರು ಸ್ವಪಕ್ಷದ ಕಾರ್ಯಕರ್ತನಿಗೆ ನಡುರಸ್ತೆಯಲ್ಲೇ ಹಿಗ್ಗಾಮುಗ್ಗಾ ಥಳಿಸಿರುವ ವೀಡಿಯೊ ವೈರಲ್ ಆಗಿದೆ.

ಬಿಜೆಪಿ ಕಾರ್ಯಕರ್ತ ಅಶೋಕ್ ಎಂಬಾತನಿಗೆ ಹಲ್ಲೆ ನಡೆಸಲಾಗಿದ್ದು, ಈತ ತನ್ನ ಸ್ವಂತ ಕಾರಿನಲ್ಲಿ ಮೋದಿ ಭಾವಚಿತ್ರ ಹಾಕಿಕೊಂಡು ಮೊಡಿಫೈ ಮಾಡಿಕೊಂಡಿದ್ದಾನೆ. ಪ್ರವೀಣ್ ಹತ್ಯೆ ಪ್ರತಿಭಟನೆಗೆ ತೆರಳಿ ವಾಪಸ್ ಬರುವಾಗ ಕೊರಟಗೆರೆ ಪಟ್ಟಣದಲ್ಲಿ ವಾಹನ ನಿಲ್ಲಿಸಿದ್ದಾನೆ. ವಾಹನದಲ್ಲಿದ್ದ ಮೋದಿ ಭಾವಚಿತ್ರಕ್ಕೆ ಕಪ್ಪು ಮಸಿ ಬಳಿದಿರುವ ಕಾರಣಕ್ಕೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸುತ್ತಿರುವ ವೀಡಿಯೊ ವೈರಲ್ ಆಗಿದ್ದು, ಬಿಜೆಪಿ ಮಂಡಲಾಧ್ಯಕ್ಷನ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

Edited By : Nagesh Gaonkar
PublicNext

PublicNext

01/08/2022 02:02 pm

Cinque Terre

163.14 K

Cinque Terre

11

ಸಂಬಂಧಿತ ಸುದ್ದಿ