ಮೈಸೂರು: ಜೆಡಿಎಸ್ ಮುಖಂಡನ ರೆಸಾರ್ಟ್ನಲ್ಲಿ ಕಾಂಗ್ರೆಸ್ ಬೆಂಬಲಿತ ಗ್ರಾ.ಪಂ ಸದಸ್ಯ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.
ಸಾಲಿಗ್ರಾಮ ತಾಲೂಕಿನ ಹೊಸೂರು ಗ್ರಾಮ ಪಂಚಾಯ್ತಿಗೆ ಸೇರಿದ ಜವರೇಗೌಡನ ಕೊಪ್ಪಲು ಗ್ರಾಮ ಪಂಚಾತಿ ಸದಸ್ಯ ಸತೀಶ್ ಮೃತ ವ್ಯಕ್ತಿ. ನಿನ್ನೆ ರಾತ್ರಿ ಜೆಡಿಎಸ್ ಮುಖಂಡ ಸಿಜೆ ದ್ವಾರಕೀಶ್ ಎಂಬುವವರಿಗೆ ಸೇರಿದ ಮೈಸೂರಿನ ಆರ್.ಟಿ.ನಗರದಲ್ಲಿರುವ ಸುಭೀಕ್ಷಾ ಗಾರ್ಡನ್ನಲ್ಲಿ ಸಾವಿಗೀಡಾಗಿದ್ದಾರೆ.
ಇದು ಆಪರೇಷನ್ ಜೆಡಿಎಸ್ ತಂದ ಸಾವು. ಸತೀಶ್ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದು ನಿಂತಿದೆ. ಹೊಸೂರು ಗ್ರಾಮ ಪಂಚಾಯ್ತಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿ ಆಗಿತ್ತು. ಒಂದು ದಿನ ಕಳೆದಿದ್ರೂ ಸತೀಶ್ ಗ್ರಾಮ ಪಂಚಾಯತಿ ಅಧ್ಯಕ್ಷ ಚುನಾವಣೆಗೆ ಮತ ಹಾಕುತ್ತಿದ್ದ. 20 ದಿನ ರಾಜ್ಯವ್ಯಾಪಿ ಟ್ರಿಪ್ ಮಾಡಿಕೊಂಡು ಬಂದ 11 ಜನ ಗ್ರಾ.ಪಂ ಸದಸ್ಯರ ಪೈಕಿ ಸತೀಶ್ ಮಾತ್ರ ಸಾವನಪ್ಪಿದ್ದಾನೆ. ಅದರಲ್ಲೂ ಮೃತದೇಹದ ಮೇಲೆ ಒಂದು ಎಳೆ ಬಟ್ಟೆಯೂ ಇರಲಿಲ್ಲ ಎಂಬುದು ಗಮನಾರ್ಹ ವಿಚಾರವಾಗಿದೆ.
ಈ ಸಂಬಂಧ ಸತೀಶ್ ಪೋಷಕರು ಹಾಗೂ ಕೆ.ಆರ್ ನಗರ ಕಾಂಗ್ರೆಸ್ ಮುಖಂಡರು ಸತೀಶ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
PublicNext
26/07/2022 08:57 pm