ನವದೆಹಲಿ: ಆಮ್ ಆದ್ಮಿ ಪಕ್ಷದ ಸಚಿವ ಸತ್ಯೇಂದ್ರ ಜೈನ್ ಮನೆ ಮೇಲೆ ಹಾಗೂ ಕಚೇರಿ ಮೇಲೆ ED ದಾಳಿ ನಡೆಸಿದೆ. ನಿನ್ನೆಯಿಂದಲೇ ದಾಳಿ ಆರಂಭಗೊಂಡಿದ್ದು ಇಂದು ಕೂಡ ಅದು ಮುಂದುವರೆದಿದೆ.
ಸಚಿವ ಸತ್ಯೇಂದ್ರ ಜೈನ್ ಮತ್ತು ಅವರ ಆಪ್ತರ ಮನೆ ಮೇಲೂ ದಾಳಿ ನಡೆದಿದ್ದು, ಇವರಿಗೆ ಸಂಬಂಧಿಸಿದ ಒಟ್ಟು 7 ಸ್ಥಳಗಳಲ್ಲಿ ಈ ಇಡಿ ದಾಳಿ ನಡೆದಿದೆ. ಕೋಟ್ಯಂತರ ರೂಪಾಯಿ ಮೌಲ್ಯದ ನಗರದು ಮತ್ತು ಆಭರಣ ವಶಕಕ್ಕೆ ಪಡೆಯಲಾಗಿದೆ.
ಈ ಕೇಸ್‌ಗೆ ಸಂಬಂಧಿಸಿದಂತೆ ಮೇ-30 ರಂದು ಸತ್ಯೇಂದ್ರ ಜೈನ್‌ರನ್ನ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆ ನಡೆಸಿದ್ದರು.ಎರಡು ತಿಂಗಳ ಹಿಂದೆ ಇಡಿ ಅಧಿಕಾರಿಗಳು ಸತ್ಯೇಂದ್ರ ಜೈನ್ ಹಾಗೂ ಅವರ ಕುಟುಂಬಕ್ಕೆ ಸಂಬಂಧಿಸಿದ ಒಟ್ಟು 4.81 ಕೋಟಿ ಮೌಲ್ಯದ ಆಸ್ತಿಯನ್ನ ಮುಟ್ಟುಗೋಲು ಹಾಕಿದ್ದರು. ಈಗ ಅದೇ ಕೇಸ್‌ನಲ್ಲಿ ಸತ್ಯೇಂದ್ರ ಜೈನ್ ರನ್ನ ಬಂಧಿಸಲಾಗಿದೆ.
PublicNext
07/06/2022 06:50 pm