ಬೆಂಗಳೂರು: ಇತ್ತೀಚೆಗೆ ನಡೆದ 545 ಪಿಎಸ್‌ಐ ಹುದ್ದೆಗಳ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ. ಈ ಅಕ್ರಮದ ಬಗ್ಗೆ ತನಿಖೆ ನಡೆದರೆ ಮತ್ತಿಬ್ಬರು ಮಂತ್ರಿಗಳ ವಿಕೆಟ್ ಬೀಳುವುದು ಖಚಿತ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗೃಹ ಇಲಾಖೆಯಿಂದ ಸಾಕಷ್ಟು ಭ್ರಷ್ಟಾಚಾರ ನಡೆದಿದೆ. 70ರಿಂದ 80 ಲಕ್ಷ ಪಡೆದಿದ್ದಾರೆ. ಎಡಿಜಿಪಿ ಆಫೀಸ್ ರೈಡ್ ಆಗಿದೆ. ಬಿಜೆಪಿಕಾರ್ಯದರ್ಶಿ ಆಗಿರುವ ಶಾಲೆ ರೈಡ್ ಆಗುತ್ತದೆ. ಇದರಿಂದ ಅನ್ಯಾಯಕ್ಕೊಳಗಾದ ಸಾವಿರಾರು ಯುವಕ ಯುವತಿಯರು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಮಾಡಿದ್ದಾರೆ. 40 ಪರ್ಸೆಂಟ್ ಸರ್ಕಾರ ಇವತ್ತು ಆ ಯುವಜನರ ಜೀವನ ಹಾಳು ಮಾಡಿದೆ ಎಂದರು.
ಪಿಎಸ್ಐ ಪರೀಕ್ಷೆ ಅಕ್ರಮದ ಬಗ್ಗೆ ತನಿಖೆ ಆಗಬೇಕು. ಈ ಪಿಎಸ್‌ಐ ಪರೀಕ್ಷೆ ಬಗ್ಗೆ ತನಿಖೆ ಆದ್ರೆ ರಾಜ್ಯ ಸರ್ಕಾರದ ಮತ್ತೆರಡು ವಿಕೆಟ್ ಪತನ ಖಚಿತ ಎಂಬುದಾಗಿ ಸ್ಪೋಟಕ ಭವಿಷ್ಯ ನುಡಿದಿದ್ದಾರೆ.
PublicNext
15/04/2022 02:20 pm