ಬೆಂಗಳೂರು: ಕೊಲೆಯಾದ ಹಿಂದೂ ಕಾರ್ಯಕರ್ತ ಹರ್ಷನಿಗಿಂತ ಹಾಳಾದ ಕಲ್ಲಂಗಡಿ ಹಣ್ಣಿನ ಮೇಲೆ ಅನುಕಂಪ ಹೆಚ್ಚಾಗಿದ್ದು ವಿಪರ್ಯಾಸವೇ ಸರಿ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಳಿ ಶಾಸಕ ಎಂ.ಪಿ ರೇಣುಕಾಚಾರ್ಯ ಅಭಿಪ್ರಾಯ ಪಟ್ಟಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಹಣ್ಣಿನ ವ್ಯಾಪಾರಿಯ ಅಂಗಡಿಯನ್ನು ಧ್ವಂಸಗೊಳಿಸಿದ್ದು ತಪ್ಪು, ಇದರಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳಲಿ. ಆದರೆ ಹತ್ಯೆಗೀಡಾದ ಹರ್ಷನಿಗಿಂತ ಕಲ್ಲಂಗಡಿ ಮೇಲೆ ಅನುಕಂಪ ಹೆಚ್ಚಾಗಿದ್ದು ವಿಪರ್ಯಾಸವೇ ಸರಿ ಎಂದು ರೇಣುಕಾಚಾರ್ಯ ಹೇಳಿದ್ದಾರೆ.
PublicNext
11/04/2022 04:03 pm