ಗಾಂಧೀನಗರ: ಎಲ್ಲರಿಗೂ ಸುಲಭವಾಗಿ ಅಶ್ಲೀಲ ವಿಡಿಯೋಗಳು ಮೊಬೈಲ್ ಫೋನ್‌ನಲ್ಲಿ ದೊರೆಯುತ್ತಿವೆ. ಹೀಗಾಗಿ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿವೆ ಎಂದು ಗುಜರಾತ್ ಸಚಿವ ಹರ್ಷ ಸಂಘವಿ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡ ಅವರು, ಅಶ್ಲೀಲ ವಿಡಿಯೋಗಳಿಂದ ಅತ್ಯಾಚಾರ ಅಷ್ಟೇ ಅಲ್ಲ; ಬದಲಾಗಿ ಅಪರಾಧ ಕೃತ್ಯಗಳು ಕೂಡ ಹೆಚ್ಚಾಗುತ್ತಿವೆ. ಸಮೀಕ್ಷೆಯೊಂದರ ಅಂಕಿ-ಅಂಶಗಳಲ್ಲಿ ಇದು ಬಹಿರಂಗವಾಗಿದೆ ಎಂದು ಹೇಳಿದ್ದಾರೆ.
ರೇಪ್ ನಡೆದಾಗ ಪ್ರತಿಯೊಬ್ಬರು ಪೊಲೀಸರ ಮೇಲೆ ಗೂಬೆ ಕೂರಿಸುತ್ತಾರೆ. ಇಂತಹ ಘಟನೆ ಬಳಿಕ ರಾಜ್ಯದಲ್ಲಿ ಅಥವಾ ದೇಶದಲ್ಲಿ ಶಾಂತಿ ಸುವ್ಯವಸ್ಥೆ ಹದಗೆಟ್ಟಿದೆ ಎನ್ನುತ್ತೇವೆ. ಪೊಲೀಸರನ್ನು ದೂರಿ ಯಾವುದೇ ಪ್ರಯೋಜನವಿಲ್ಲ. ಕೆಲದಿನಗಳ ಹಿಂದೆ ಗುಜರಾತ್‍ನಲ್ಲಿ ತಂದೆಯೇ ಮಗಳ ಮೇಲೆ ಅತ್ಯಾಚಾರ ಎಸಗಿದ್ದ ಇದರ ಹಿಂದೆ ಮೊಬೈಲ್ ಫೋನ್ ಕಾರಣವಾಗಿರುವುದು ಬೆಳಕಿಗೆ ಬಂದಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
PublicNext
02/04/2022 06:39 pm