ನವದೆಹಲಿ: ಬಿಜೆಪಿಯವರು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ರನ್ನು ಕೊಲೆ ಮಾಡಲು ಯತ್ನಿಸಿದೆ. ಇಂದು ಅವರ ಮನೆಗೆ ನುಗ್ಗಿದ ಕೆಲ ಗೂಂಡಾಗಳು ಕೇಜ್ರಿವಾಲ್ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ನಾಯಕ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ನವದೆಹಲಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಚುನಾವಣೆಯಲ್ಲಿ, ಹಾಗೂ ರಾಜಕೀಯವಾಗಿ ಕೇಜ್ರಿವಾಲ್ ಅವರನ್ನು ಎದುರಿಸಲಾಗದ ಬಿಜೆಪಿಯವರು ಕೊಲೆ ಮಾಡುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಇಂದು ನಡೆದ ಹಿಂಸಾಚಾರದಲ್ಲಿ ಕೇಜ್ರಿವಾಲ್ ಮನೆಗೆ ನುಗ್ಗಿದ ಗೂಂಡಾಗಳು ಅಲ್ಲಿನ ಸಿಸಿ ಕ್ಯಾಮೆರಾಗಳನ್ನು ಒಡೆದು ಹಾಕಿದ್ದಾರೆ. ಪಂಜಾಬ್ನಲ್ಲಿ ಒಂದೇ ಒಂದು ಸೀಟು ಗೆಲ್ಲಲಾಗದ ಬಿಜೆಪಿ ಎಎಪಿ ಮೇಲಿನ ಅಸಮಾಧಾನದಿಂದ ಬಿಜೆಪಿ ಈ ರೀತಿ ಮಾಡಿದೆ. ನಾವು ಇದರ ವಿರುದ್ಧ ಕಾನೂನು ಹೋರಾಟ ನಡೆಸುತ್ತೇವೆ ಎಂದು ಮನೀಶ್ ಸಿಸೋಡಿಯಸ್ ಹೇಳಿದ್ದಾರೆ.
PublicNext
30/03/2022 06:30 pm