ಕೋಲ್ಕತ್ತಾ: ದೀದಿ ನಾಡಲ್ಲಿ ಯಾವುದೂ ಸರಿಯಿಲ್ಲ.ರಾಜಕೀಯ ದಳ್ಳುರಿಯಿಂದ ಇಲ್ಲಿ ಸಾಮಾನ್ಯ ಜನರ ಹತ್ಯೆ ಆಗುತ್ತಿದೆ. ಇದಕ್ಕೆ ಸಿಟ್ಟಾದ ಕೊಲ್ಕತ್ತಾ ಹೈಕೋರ್ಟ್ ಇಲ್ಲಿ ನಡೆದ ಸಜೀವ ದಹನ ಕೇಸ್ ತನಿಖೆ ಮಾಡಲು ಸಿಬಿಐಗೆ ಒಪ್ಪಿಸುವಂತೆ ಆದೇಶ ನೀಡಿದೆ.
ಬಿರ್ಭುಮ್ ಗ್ರಾಮದಲ್ಲಿ ನಡೆದ ಹಿಂಸಾಚಾರದಲ್ಲಿ 12 ಜನ ಸಜೀವ ದಹನ ಆಗಿದ್ದರು. ಆದರೆ, ರಾಜ್ಯ ಸರ್ಕಾರ ಈ ಕೇಸ್ ಅನ್ನ ಸಿಬಿಐ ತನಿಖೆಗೆ ಒಪ್ಪಿಸೋದು ಬೇಡ ಅಂತಲೇ ಹೇಳಿತ್ತು.
ಆದರೆ, ಕೋಲ್ಕತ್ತಾ ಹೈಕೋರ್ಟ್ ಈ ಮನವಿಯನ್ನ ತಳ್ಳಿ ಹಾಕಿದೆ. ಪ್ರಕರಣವನ್ನ ಸಿಬಿಐಗೆ ಒಪ್ಪಿಸಲು ಸರ್ಕಾರಕ್ಕೆ ಆದೇಶ ನೀಡಿದೆ.
PublicNext
25/03/2022 02:09 pm