ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಟ್ವಿಟ್ಟರ್ ಖಾತೆಯನ್ನು ಹ್ಯಾಕರ್‌ಗಳು ಹ್ಯಾಕ್ ಮಾಡಿ, 'ಭಾರತದಲ್ಲಿ ಬಿಟ್ ಕಾಯಿನ್ ಚಲಾವಣೆ ಕಾನೂನುಬದ್ಧ' ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಭಾರತದಲ್ಲಿ ಬಿಟ್ ಕಾಯಿನ್ ಚಲಾವಣೆ ಕಾನೂನುಬದ್ಧವಾಗಿದೆ. ಸರ್ಕಾರ 500 ಬಿಟ್ ಕಾಯಿನ್ ಖರೀದಿಸಿದ್ದು ಪ್ರಜೆಗಳಿಗೆ ಹಂಚಲಾಗುವುದು ಎಂದು ಟ್ವೀಟ್ ಮಾಡಲಾಗಿತ್ತು. ಈ ವಿಚಾರ ತಕ್ಷಣವೇ ಗೊತ್ತಾಗಿ ಟ್ವೀಟರ್ ಸಂಸ್ಥೆಗೆ ಮಾಹಿತಿ ನೀಡಿ ಖಾತೆಯನ್ನು ಸರಿಪಡಿಸಲಾಗಿದೆ. ಈ ಹಿಂದಿನ ಟ್ವೀಟ್ ಪರಿಗಣಿಸದಂತೆ @PMOIndia ಖಾತೆಯ ಮೂಲಕ ಮನವಿ ಮಾಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈಗ ಮೋದಿ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿರುವುದು ಟ್ರೆಂಡಿಂಗ್ ಟಾಪಿಕ್ ಆಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ PMO India, 'ನರೇಂದ್ರ ಮೋದಿ ಟ್ವಿಟ್ಟರ್ ಖಾತೆಯಲ್ಲಿ ಉಂಟಾದ ಸಮಸ್ಯೆಯನ್ನು ಸರಿಪಡಿಸಲಾಗಿದೆ. ಈ ಬಗ್ಗೆ ಟ್ವಿಟರ್ಗೆ ಮಾಹಿತಿ ನೀಡಲಾಗಿದ್ದು, ತಕ್ಷಣ ಖಾತೆಯನ್ನು ಸುರಕ್ಷಿತಗೊಳಿಸಲಾಗಿದೆ. ಸಮಸ್ಯೆ ಉಂಟಾದ ಕೆಲ ಸಮಯದ ಅವಧಿಯಲ್ಲಿ ಪೋಸ್ಟ್ ಆದ ಟ್ವೀಟ್ ಅನ್ನು ಪರಿಗಣಿಸದಿರಿ' ಎಂದು ಮಾಹಿತಿ ನೀಡಲಾಗಿದೆ.
PublicNext
12/12/2021 07:45 am