ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಕಲಿ ಅಂಕಪಟ್ಟಿ ಬಳಸಿದ್ದ ಯುಪಿ ಬಿಜೆಪಿ ಶಾಸಕ ಅನರ್ಹ, 5 ವರ್ಷ ಜೈಲು ಶಿಕ್ಷೆ

ಲಕ್ನೋ: 28 ವರ್ಷಗಳ ಹಳೆಯ ಪ್ರಕರಣದಲ್ಲಿ ಅಯೋಧ್ಯೆಯ ಗೋಸಾಯಿಗಂಜ್‌ನ ಬಿಜೆಪಿ ಶಾಸಕ ಉತ್ತರ ಪ್ರದೇಶ ವಿಧಾನಸಭೆಯ ಸದಸ್ಯತ್ವ ಕಳೆದುಕೊಂಡಿದ್ದಾರೆ.

ಇಂದ್ರ ಪ್ರತಾಪ್ ಅಲಿಯಾಸ್ ಖಬ್ಬು ತಿವಾರಿ, ಕಾಲೇಜು ಪ್ರವೇಶಾತಿಗಾಗಿ ನಕಲಿ ಅಂಕಪಟ್ಟಿ ಬಳಸಿದ್ದಕ್ಕಾಗಿ ವಿಶೇಷ ನ್ಯಾಯಾಲಯವು ಐದು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಉತ್ತರ ಪ್ರದೇಶದ ವಿಧಾನಸಭೆಯ ಸದಸ್ಯತ್ವದಿಂದಲೂ ಅನರ್ಹಗೊಳಿಸಲಾಗಿದೆ ಎಂದು ವಿಧಾನಸಭಾ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ದುಬೆ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಅಯೋಧ್ಯೆಯ ಸಂಸದ/ ಶಾಸಕ ವಿಶೇಷ ನ್ಯಾಯಾಲಯದ ನ್ಯಾಯಧೀಶ ಪೂಜಾ ಸಿಂಗ್ ಅವರು ಅಕ್ಟೋಬರ್ 18ರಂದು ತೀರ್ಪು ನೀಡಿದ್ದರು. ನಂತರ ತಿವಾರಿ ಅವರನ್ನು ಕಸ್ಟಡಿಗೆ ತೆಗೆದುಕೊಂಡು ಜೈಲಿಗೆ ರವಾನಿಸಲಾಯಿತು. ನ್ಯಾಯಾಲಯವು ಆತನಿಗೆ 8,000 ರೂ.ಗಳ ದಂಡವನ್ನು ವಿಧಿಸಿದೆ. 1992ರಲ್ಲಿ ಅಯೋಧ್ಯೆ ಸಾಕೇತ್ ಪದವಿ ಕಾಲೇಜಿನ ಪ್ರಾಂಶುಪಾಲರಾಗಿದ್ದ ಯದುವಂಶ್ ರಾಮ್ ತ್ರಿಪಾಠಿ ಅವರು ತಿವಾರಿ ವಿರುದ್ಧ ನಕಲಿ ಅಂಕಪಟ್ಟಿ ಬಳಕೆಗೆ ಸಂಬಂಧಿಸಿದಂತೆ ರಾಮ ಜನ್ಮಭೂಮಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

Edited By : Vijay Kumar
PublicNext

PublicNext

09/12/2021 09:54 pm

Cinque Terre

43.86 K

Cinque Terre

12

ಸಂಬಂಧಿತ ಸುದ್ದಿ