ಕೊಚ್ಚಿ: ಕಾನೂನು ಮುರಿಯುವವರ ಹೆಡೆಮುರಿ ಕಟ್ಟಬೇಕಾದ ಪೊಲೀಸರೇ ಕ್ರಿಮಿನಲ್‌ಗಳಾದರೆ ಹೇಗೆ? ಈಗ ಈ ಮಾತು ಕೇರಳದ ಪಾಲಿಗೆ ನಿಜವಾಗಿದೆ. ಕೇರಳ ರಾಜ್ಯ ಪೊಲೀಸ್ ಇಲಾಖೆಯಲ್ಲಿ 744 ಪೊಲೀಸ್ ಸಿಬ್ಬಂದಿಗೆ ಕ್ರಿಮಿನಲ್ ಹಿನ್ನೆಲೆ ಇರುವುದು ತಿಳಿದು ಬಂದಿದೆ. ಇದರಲ್ಲಿ 18 ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಈ ಬಗ್ಗೆ ಸ್ವತಃ ಅಲ್ಲಿನ ಸಿಎಂ ಪಿಣರಾಯಿ ವಿಜಯನ್ ಅವರೇ ಮಾಹಿತಿ ನೀಡಿದ್ದಾರೆ.
ಶಾಸಕರೊಬ್ಬರು ವಿಧಾನಸಭೆಯಲ್ಲಿ ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ ಪಿಣರಾಯಿ ವಿಜಯನ್ ಈ ಬಗ್ಗೆ ವಿವರ ನೀಡಿದ್ದಾರೆ. ಕೇರಳ ರಾಜ್ಯದಲ್ಲಿ ಪೊಲೀಸರು ಕ್ರಿಮಿನಲ್ ದೌರ್ಜನ್ಯಗಳಲ್ಲಿ ಭಾಗಿಯಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆತಂಕ ವ್ಯಕ್ತವಾಗಿದೆ. ಹೀಗಾಗಿ ತಾವು ವಿಧಾನಸಭೆಯಲ್ಲಿ ಪ್ರಶ್ನೆ ಕೇಳಿದ್ದಾಗಿ ಶಾಸಕ ರೇಮ ಅವರು ತಿಳಿಸಿದ್ದಾರೆ. ಪೊಲೀಸರ ಸಮೂಹದಲ್ಲೇ ಕ್ರಿಮಿನಲ್‌ಗಳು ಇದ್ದಾರೆ ಎನ್ನುವುದು ಆತಂಕದ ಸಂಗತಿ ಎಂದು ಅವರು ಭಿಪ್ರಾಯಪಟ್ಟಿದ್ದಾರೆ.
PublicNext
25/11/2021 05:54 pm