ಲಕ್ನೋ: ವ್ಯಕ್ತಿಯೋರ್ವ ಬೆದರುಬೊಂಬೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಿತ್ರವನ್ನು ಅಂಟಿಸಿ ಜೈಲು ಸೇರಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಚಂದೌಸಿ ಪ್ರದೇಶದ ನಿವಾಸಿ ಅಭಿಷೇಕ್ ಗುಪ್ತಾ ಜೈಲು ಸೇರಿದ ವ್ಯಕ್ತಿ. ಅಭಿಷೇಕ್ ಈ ರಾಜಕಾರಣಿಗಳು, ಪ್ರಭಾವಿ ವ್ಯಕ್ತಿಗಳ ಭಾವಚಿತ್ರವನ್ನು ಸ್ವತಃ ತಾನೇ ಬದಲಾಯಿಸಿ ನಂತರ ತಮ್ಮ ವಾಟ್ಸಪ್ ಸ್ಟೇಟಸ್ ಎಂದು ಹಂಚಿಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಚಕ್ರೇಶ್ ಮಿಶ್ರಾ ತಿಳಿಸಿದ್ದಾರೆ.
ಪೊಲೀಸರ ಕೈಗೆ ಸಿಕ್ಕಿ ಬಿದ್ದ ಕಿಡಿಗೇಡಿಗಳು ಮೆಸೆಂಜರ್ ಆ್ಯಪ್‌ನಲ್ಲಿ ಹಂಚಿಕೊಂಡಿರುವ ಚಿತ್ರದಲ್ಲಿ ಪ್ರಧಾನಿ ಮೋದಿ, ಗೃಹ ಸಚಿವರಾದ ಅಮಿತ್ ಶಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್)ನ ಮುಖ್ಯಸ್ಥರಾದ ಮೋಹನ್ ಭಾಗವತ್ ಮತ್ತು ಇತರರ ಮುಖಗಳನ್ನು ಬೆದರು ಬೊಂಬೆಯಲ್ಲಿ ಅಂಟಿಸಿರುವುದನ್ನು ಕಾಣಬಹುದು. ಈ ಸಂಬಂಧ ಚಂದೌಸಿ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
22/10/2021 02:33 pm