ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಮೆಝಾನ್‌ನಿಂದ 8, 546 ಕೋಟಿ ರೂ ಲಂಚ ಪಡೆದವರು ಯಾರು?: ಕಾಂಗ್ರೆಸ್ ಪ್ರಶ್ನೆ

ನವದೆಹಲಿ: ಅಮೆರಿಕದ ಇ-ಕಾಮರ್ಸ್​ ದೈತ್ಯ ಸಂಸ್ಥೆಯಾಗಿರುವ ಅಮೆಜಾನ್ ಭಾರತದಲ್ಲಿನ ವ್ಯಾಪಾರಕ್ಕೆ ಅಧಿಕಾರಿಗಳಿಗೆ ಲಂಚ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್​ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಅಲ್ಲದೇ ಈ ಪ್ರಕರಣವನ್ನು ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಾಧೀಶರಿಂದ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದೆ.

ಕಳೆದ ಎರಡು ವರ್ಷಗಳಲ್ಲಿ ಕಾನೂನು ಶುಲ್ಕದ ಹೆಸರಿನಲ್ಲಿ ಯುಎಸ್ ಇ-ಕಾಮರ್ಸ್ ದೈತ್ಯ ಅಮೆಜಾನ್​ ಇಲ್ಲಿನ ಅಧಿಕಾರಿಗೆ 8, 546 ಕೋಟಿ ರೂ ಲಂಚ ನೀಡಿರುವ ಕುರಿತು ವರದಿ ನೀಡುವಂತೆ ಪ್ರಧಾನಿ ಮೋದಿಗೆ ಕೇಳಿದೆ. ಅಮೆಜಾನ್​ ಲಂಚದ ಹಣ ಪ್ರಕರಣ ಕುರಿತು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್​ ವಕ್ತಾರ ರಣದೀಪ್​ ಸುರ್ಜೇವಾಲಾ ಈ ಸಂಬಂದ ಕೇಂದ್ರ ಸರ್ಕಾರಕ್ಕೆ ಅನೇಕ ಪ್ರಶ್ನೆಗಳನ್ನು ಹಾಕಿದ್ದು, ಇದಕ್ಕೆ ಉತ್ತರಿಸುವಂತೆ ಮೋದಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

1. ಯಾವ ಅಧಿಕಾರಿ ಮತ್ತು ನಾಯಕರು 8, 546 ಕೋಟಿ ರೂ ಲಂಚ ಪಡೆದರು?

2. ಇ-ಕಾಮರ್ಸ್ ಕಂಪನಿಗಳ ವ್ಯವಹಾರವನ್ನು ನಡೆಸಲು ಕಾನೂನು ಮತ್ತು ನಿಯಮಗಳನ್ನು ಬದಲಿಸಲು ಈ ಲಂಚವನ್ನು ಮೋದಿ ಸರ್ಕಾರಕ್ಕೆ ನೀಡಲಾಗಿದೆಯೇ ಈ ಮೂಲಕ ದೇಶದ ಸಣ್ಣ ವ್ಯಾಪಾರಿ, ಕೈಗಾರಿಕೆ ಮುಚ್ಚಲು ಮುಂದಾಗಿದೆಯೇ?

3. ಈ ಲಂಚವನ್ನು ಪಾವತಿಸಿದ ಈ ಆರು ಅಮೆಜಾನ್ ಕಂಪನಿಗಳ ಆಂತರಿಕ ಸಂಬಂಧಗಳೇನು? ಈ ಮೊತ್ತವನ್ನು ನೀಡಿದ ಈ ಕಂಪನಿಗಳೊಂದಿಗೆ ವ್ಯಾಪಾರ ಸಂಬಂಧ ಹೊಂದಿರುವ ಕಂಪನಿಗಳು ಯಾರು?

4. ಭಾರತದಲ್ಲಿ ಮತ್ತು ಅಮೆರಿಕದಲ್ಲಿ ಲಂಚ ನೀಡುವುದು ಹಾಗೂ ಲಾಬಿ ಮಾಡುವುದು ಕಾನೂನುಬಾಹಿರ. ಹಾಗಾದರೆ ಈ ಬೃಹತ್ ಮೊತ್ತವನ್ನು ಹೇಗೆ ಪಾವತಿಸಲಾಗಿದೆ?

5. ಈ ಲಂಚವು ರಾಷ್ಟ್ರೀಯ ಭದ್ರತೆಯ ಮೇಲೆ ರಾಜಿ ಅಲ್ಲವೇ?

6. ಪ್ರಧಾನಿ ಮೋದಿಯವರು ಈ ಬಗ್ಗೆ ಏಕೆ ಮೌನವಾಗಿದ್ದಾರೆ. . ಅವರು ಈ ವಿಷಯವನ್ನು ತನಿಖೆ ಮಾಡಲು ಕೇಳುತ್ತಾರೆಯೇ?

7. ಈ ಸಮಸ್ಯೆಯನ್ನು ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಾಧೀಶರು ತನಿಖೆ ಮಾಡಬೇಕಲ್ಲವೇ?

ಈ ಎಲ್ಲ ಪ್ರಶ್ನೆಗಳನ್ನು ಕೇಳಿರುವ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ, ಇದಕ್ಕೆಲ್ಲ ಕೇಂದ್ರ ಸರ್ಕಾರ ಉತ್ತರಿಸಬೇಕೆಂದು ಸವಾಲು ಹಾಕಿದ್ದಾರೆ.

Edited By : Nagaraj Tulugeri
PublicNext

PublicNext

22/09/2021 11:01 pm

Cinque Terre

104.25 K

Cinque Terre

4

ಸಂಬಂಧಿತ ಸುದ್ದಿ