ಶ್ರೀನಗರ: ಜಮ್ಮು ಕಾಶ್ಮೀರದ ಪ್ರತ್ಯೇಕತಾವಾದಿ ಹಿರಿಯ ಹೋರಾಟಗಾರ ಸೈಯದ್ ಅಲಿ ಗಿಲಾನಿ ಮೃತದೇಹದ ಮೇಲೆ ಪಾಕ್ ಧ್ವಜ ಹೊದಿಸಲಾಗಿತ್ತು ಹಾಗೂ ಶವ ಸಂಸ್ಕಾರದ ವೇಳೆ ಪಾಕ್ ಪರ ಘೋಷಣೆ ಕೂಗಲಾಗಿತ್ತು ಎಂಬ ಆರೋಪದ ಮೇಲೆ ಗಿಲಾನಿ ಕುಟುಂಬದ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಗಿಲಾನಿ ಅಂತ್ಯ ಸಂಸ್ಕಾರದ ವೇಳೆ ದೇಶ ವಿರೋಧಿ ಘೋಷಣೆಗಳನ್ನು ಕೂಗಿದ ಆರೋಪದ ಮೇಲೆ ಗಿಲಾನಿ ಕುಟುಂಬದ ವಿರುದ್ಧ ಬದ್ಗಾಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸೈಯದ್ ಅಲಿ ಗಿಲಾನಿ ಮೃತದೇಹಕ್ಕೆ ಪಾಕಿಸ್ತಾನದ ಧ್ವಜವನ್ನು ಹೊದಿಸಿದವರ ಮೇಲೆಯೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
PublicNext
05/09/2021 07:25 am