ದಾವಣಗೆರೆ: "ಮೈಸೂರು ರೇಪ್ ಬಗ್ಗೆ ಕೇಳಬಾರದು. ಬೇರೆ ಇದ್ದರೆ ಕೇಳು'' ಎಂದು ಹೇಳುವ ಮೂಲಕ ಸಂಸದ ಜಿ. ಎಂ. ಸಿದ್ದೇಶ್ವರ್ ಉಡಾಫೆ ಮಾತು ಆಡಿದ್ದಾರೆ.
ಮಾಧ್ಯಮದವರ ಜೊತೆ ಮಾತನಾಡಿದ ಅವರು ಮೈಸೂರಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ಪ್ರಕರಣ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಈ ರೀತಿಯ ಬೇಜವಾಬ್ದಾರಿ ಉತ್ತರ ನೀಡಿದರು.
ಮೈಸೂರಿನಲ್ಲಿ ರೇಪ್ ಆದ್ರೆ ನನಗ್ಯಾಕೆ ಕೇಳ್ತೀರಾ. ನಾನು ಏನನ್ನೂ ನೋಡಿಲ್ಲ. ಜಿಲ್ಲೆಗೆ ಸಂಬಂಧಿಸಿದಂತೆ ಏನಿದ್ರೂ ಕೇಳಿ. ಸರಿಯಾದ ರೀತಿಯಲ್ಲಿ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಹೇಳ್ತೇನೆ. ಸಮಸ್ಯೆ ಇದ್ದರೆ ಕ್ರಮ ತೆಗೆದುಕೊಳ್ಳಲು ಹೇಳ್ತೇನೆ. ಅದನ್ನು ಬಿಟ್ಟು ಎಲ್ಲೆಲ್ಲಿಯದ್ದು ಕೇಳಿದರೆ ಹೇಗೆ ಎಂದರು.
ನಾನು ಬೆಳಿಗ್ಗೆಯಿಂದ ಸಂಜೆಯವರೆಗೆ ಬ್ಯುಸಿ ಇರುತ್ತೇನೆ. ರಾತ್ರಿ 11 ಗಂಟೆಗೆ ಆಗುತ್ತೆ ಮನೆಗೆ ಬರಲು. ಪೇಪರ್ ಓದೋಕೆ ಆಗೋಲ್ಲ. ಬೇರೆ ವಿಚಾರದ ಬಗ್ಗೆ ಏನು ಗೊತ್ತಾಗಲ್ಲ. ನೀವು ಏನೇನೋ ಬಿತ್ತರಿಸುತ್ತೀರಾ. ಅದನ್ನೆಲ್ಲಾ ನೋಡಲು ಆಗುತ್ತಾ. ಯಾರಾದರೂ ಹೇಳಿದರೆ ಕೇಳುತ್ತೇನೆ ಅಷ್ಟೇ ಎಂದು ಹೇಳುವ ಮೂಲಕ ಉಡಾಫೆ ರೀತಿ ವರ್ತಿಸಿದ್ದರು.
ಇನ್ನು ಪೆಟ್ರೋಲ್ ದರ ಹೆಚ್ಚಳದ ಬಗ್ಗೆ ಕೇಳಿದಾಗಲೂ ಸೈಕಲ್ ನಲ್ಲಿ ಓಡಾಡಿ ಎಂದು ಹೇಳುವ ಮೂಲಕ ಟೀಕೆಗೆ ಗುರಿಯಾಗಿದ್ದ ಸಿದ್ದೇಶ್ವರ್ ಮತ್ತೆ ಅದೇ ರೀತಿಯ ವರ್ತನೆ ತೋರಿದ್ದಾರೆ.
PublicNext
27/08/2021 03:25 pm