ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗೋವಾ ಗ್ಯಾಂಗ್ ರೇಪ್ ಪ್ರಕರಣ: ಅವರು ಆ ಹೊತ್ತಲ್ಲಿ ಅಲ್ಲೇಕೆ ಹೋಗಿದ್ರು ಎಂದ ಸಿಎಂ

ಪಣಜಿ: ಕಡಲತೀರದಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಮಕ್ಕಳು ರಾತ್ರಿಹೊತ್ತು ಕಡಲ ತೀರದಲ್ಲಿ ಏನು ಮಾಡುತ್ತಿದ್ದರು?ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಮಕ್ಕಳು ಅಹೋರಾತ್ರಿ ಬೀಚ್ ನಲ್ಲಿ ಇದ್ದಾಗ ಪೋಷಕರು ಆ ಬಗ್ಗೆ ಕೇಳಬೇಕಿತ್ತು. ಪೋಷಕರ ಮಾತನ್ನು ಮಕ್ಕಳು ಕೇಳದೇ ಇರೋದಕ್ಕೆ ಸರ್ಕಾರವನ್ನು ಹೊಣೆಗಾರ ಮಾಡುವುದು ಸರಿಯಲ್ಲ ಎಂದಿದ್ದಾರೆ.

ಗೃಹ ಖಾತೆಯನ್ನೂ ಸಹ ಹೊಂದಿರುವ ಸಾವಂತ್, ತಮ್ಮ ಮಕ್ಕಳ ಸುರಕ್ಷತೆಯನ್ನು ಖಾತರಿಪಡಿಸುವ ಜವಾಬ್ದಾರಿ ಪೋಷಕರ ಮೇಲಿದೆ ಮತ್ತು ತಮ್ಮ ಮಕ್ಕಳನ್ನು, ವಿಶೇಷವಾಗಿ ಅಪ್ರಾಪ್ತ ವಯಸ್ಕರನ್ನು ರಾತ್ರಿಯಲ್ಲಿ ಹೊರಗೆ ಬಿಡಬಾರದು ಎಂದು ಹೇಳಿದ್ದಾರೆ.

ಕರಾವಳಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಗೋವಾ ಕಾಂಗ್ರೆಸ್ ವಕ್ತಾರ ಆಲ್ಟೋನ್ ಡಿ ಕೋಸ್ಟಾ ಗುರುವಾರ ಹೇಳಿದ್ದಾರೆ. “ರಾತ್ರಿಯಲ್ಲಿ ತಿರುಗಾಡುವಾಗ ನಾವು ಯಾಕೆ ಭಯಪಡಬೇಕು? ಅಪರಾಧಿಗಳು ಜೈಲಿನಲ್ಲಿರಬೇಕು ಮತ್ತು ಕಾನೂನು ಪಾಲಿಸುವ ನಾಗರಿಕರು ಮುಕ್ತವಾಗಿ ತಿರುಗಾಡಬೇಕು, ”ಎಂದು ಕೋಸ್ಟಾ ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

29/07/2021 08:17 pm

Cinque Terre

89.43 K

Cinque Terre

11

ಸಂಬಂಧಿತ ಸುದ್ದಿ