ಕೇರಳದ ಮಲಪ್ಪುರಂ ಜಿಲ್ಲೆಯ ತೆನಿಪಾಲಂ ಪಟ್ಟಣದಲ್ಲಿ ಫೆಬ್ರವರಿ 19ರಂದು ನಡೆದ ಮೆರವಣಿಗೆಯಲ್ಲಿ ಕಂಡುಬಂದ ಆಘಾತಕಾರಿ ದೃಶ್ಯದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಟ್ವೀಟ್ ಮಾಡಿರುವ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅಸಮಾಧಾನ ಹೊರ ಹಾಕಿದ್ದಾರೆ.
ಇಸ್ಲಾಮಿಕ್ ಸಂಸ್ಥೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ‘1921 ಮಲಬಾರ್ ಹಿಂದೂ ಜನಾಂಗೀಯ ಹತ್ಯೆಯ’ ಶತಮಾನೋತ್ಸವವನ್ನು ಆಚರಿಸಿತು. ಈ ವೇಳೆ ಕೈಗೊಂಡ ಮೆರವಣಿಗೆಯಲ್ಲಿ ಇಬ್ಬರಿಗೆ ಆರ್‌ಎಸ್‌ಎಸ್ ಧರಿಸುಗಳನ್ನು ಹಾಕಿ ಅವರ ಕೈಗೆ ಕಬ್ಬಿಣದ ಸರಪಳಿ ಕಟ್ಟಲಾಗಿತ್ತು. ಅಷ್ಟೇ ಅಲ್ಲದೆ ಅವರನ್ನು ಬಂಧಿಸಿ ಕರೆದೊಯ್ಯುತ್ತಿರು ರೀತಿ ಬಿಂಬಿಸಲಾಯಿತು.
ಮೆರವಣಿಗೆಯಲ್ಲಿ ಅಲ್ಲಾಹು ಅಕ್ಬರ್, ಲಾ ಇಲಾಹ ಇಲ್ಲಲ್ಲಾ ಮುಹಮ್ಮದೂರ್ ರಸೂಲುಲ್ಲಾ ಸೇರಿದಂತೆ ಅನೇಕ ಘೋಷಣೆಗಳನ್ನು ಕೂಗುತ್ತಾ ಪಿಎಫ್‌ಐ ಕಾರ್ಯಕರ್ತರು ಹೆಜ್ಜೆ ಹಾಕಿದ್ದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಈ ವಿಡಿಯೋವನ್ನು ಟ್ವೀಟ್ ಮಾಡಿರುವ ಸಂಸದೆ ಶೋಭಾ ಕರಂದ್ಲಾಜೆ, ಕೇರಳದ ಆಘಾತಕಾರಿ ದೃಶ್ಯಗಳು! ಉಗ್ರಗಾಮಿ ಇಸ್ಲಾಮಿಕ್ ಸಂಸ್ಥೆ ಪಿಎಫ್‌ಐ ‘1921 ಮಲಬಾರ್ ಹಿಂದೂ ಜನಾಂಗೀಯ ಹತ್ಯೆಯ’ ಶತಮಾನೋತ್ಸವವನ್ನು ಆಚರಿಸಿತು. ಎಂದಿನಂತೆ ಸರ್ಕಾರವು ಕೋಮು ಸೌಹಾರ್ದತೆಯನ್ನು ಹಾಳು ಮಾಡುವ, ಭಂಗಗೊಳಿಸುವ ಇತಿಹಾಸವನ್ನು ಹೊಂದಿರುವ ಆಮೂಲಾಗ್ರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವ ಧೈರ್ಯವನ್ನು ತೋರಿಸಿಲ್ಲ ಎಂದು ದೂರಿದ್ದಾರೆ.
PublicNext
20/02/2021 11:01 pm