ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರಧಾನಿ ಭದ್ರತಾ ಲೋಪ ಕೇಸ್ : ತನಿಖೆ ನಡೆಸದಂತೆ ಬೆದರಿಕೆ ಕರೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಪಂಜಾಬ್ ಭೇಟಿ ವೇಳೆ ಉಂಟಾದ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ವಿಚಾರಣೆ ನಡೆಸದಂತೆ ಸುಪ್ರೀಂ ಗೆ ಬೆದರಿಕೆ ಕರೆ ಬಂದಿದೆ. ಜನವರಿ 5 ರಂದು ಪಂಜಾಬ್ ನಲ್ಲಿ ನಡೆದ ಈ ಭದ್ರತಾ ಲೋಪ ಪ್ರಕರಣಕ್ಕೆ ಇಂದು ಸುಪ್ರೀಂ ಮಹತ್ವದ ಆದೇಶ ನೀಡಿದೆ. ನಿವೃತ್ತ ನ್ಯಾಯಾಧೀಶರ ನೇತೃತ್ವದ ನಾಲ್ವರನ್ನೊಳಗೊಂಡ ವಿಶೇಷ ತನಿಖಾ ತಂಡವನ್ನ ರಚಿಸಿದೆ.

ಇದರ ಮಧ್ಯೆ ಬ್ರಿಟನ್ನಿಂದ ಸುಪ್ರೀಂ ಕೋರ್ಟ್ನ ಹಲವು ವಕೀಲರಿಗೆ ಬೆದರಿಕೆ ಕರೆಗಳು ಬಂದಿವೆ. ಮೂಲಗಳ ಪ್ರಕಾರ, ರೆಕಾರ್ಡ್ ಮಾಡಿರುವ ಮೆಸೇಜ್ ಗಳ ಜೊತೆಗೆ ಬೆದರಿಕೆ ಕರೆ ಕೂಡ ಬಂದಿದೆವೆಯಂತೆ. ಈ ಕರೆಗಳು ಇಂಗ್ಲೆಂಡ್ ನಂಬರ್ನಿಂದ ಬಂದಿವೆ. ಹೆಸರು ಹೇಳದ ಸಂಘಟನೆಯ ಹೆಸರಲ್ಲಿ ಬೆದರಿಕೆ ಕರೆ ಹಾಗೂ ಮೆಸೇಜ್ ಗಳನ್ನ ಕಳುಹಿಸಲಾಗಿದೆ.

1984ರಲ್ಲಿ ಸಿಖ್ ವಿರೋಧಿ ದಂಗೆಯ ಹಿಂಸಾಚಾರಕ್ಕೆ ಇನ್ನೂ ನಿಮಗೆ ನ್ಯಾಯ ಕೊಡಿಸಲು ಸಾಧ್ಯವಾಗಿಲ್ಲ. ಹೀಗಿರುವಾಗ, ಮೋದಿ ಭದ್ರತಾ ಲೋಪ ಪ್ರಕರಣವನ್ನ ಸ್ವತಂತ್ರ ತನಿಖೆಗೆ ನೀಡ್ತೀರಾ? ಎಂದು ಬೆದರಿಕೆ ಹಾಕಿದ್ದಾರೆ ಎಂದು ವರದಿಯಾಗಿದೆ.

Edited By : Nirmala Aralikatti
PublicNext

PublicNext

10/01/2022 09:56 pm

Cinque Terre

91.27 K

Cinque Terre

18

ಸಂಬಂಧಿತ ಸುದ್ದಿ