ಮಂಗಳೂರು : 73 ನೇ ಗಣರಾಜ್ಯೋತ್ಸವದ ದಿನ ಕೇರಳದ ಕಾಸರಗೋಡಿನಲ್ಲಿ ತಲೆಕೆಳಗಾಗಿ ರಾಷ್ಟ್ರ ಧ್ವಜ ಹಾರಿಸಿ ಕೇರಳದ ಬಂದರು ಸಚಿವ ಅಹ್ಮದ್ ದೇವರ್ ಕೋವಿಲ್ ವಿವಾದಕ್ಕೆ ಗುರಿಯಾಗಿದ್ದಾರೆ. ಕಾಸರಗೋಡು ಜಿಲ್ಲಾಡಳಿತದ ವತಿಯಿಂದ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಚಿವರು ಅತಿಥಿಗಳಾಗಿ ಧ್ವಜಾರೋಹಣ ನೆರವೇರಿಸಿದ್ದರು. ಕಾಸರಗೋಡಿನ ಮುನ್ಸಿಪಲ್ ಸ್ಟೇಡಿಯಂನಲ್ಲಿ ನಡೆದ ಘಟನೆಯಲ್ಲಿ ಈ ಬೆಳವಣಿಗೆ ನಡೆದಿದೆ.
ಧ್ವಜ ಏರಿಸಿ ರಾಷ್ಟ್ರಗೀತೆ ಮುಗಿಯುವವರೆಗೂ ರಾಷ್ಟ್ರ ಧ್ವಜ ತಲೆಗೆಳಗಾಗಿಯೇ ಇತ್ತು. ವ್ಯಕ್ತಿಯೋರ್ವರು ಇದನ್ನು ಗಮನಿಸಿ ತಕ್ಷಣ ವಿಷಯ ತಿಳಿಸಿದ ಬಳಿಕ ಧ್ವಜ ಕೆಳಗಿಳಿಸಿ ಮತ್ತೆ ಹಾರಾಟ ನಡೆಸಿದ್ದಾರೆ. ಘಟನೆ ಕುರಿತು ಎಡಿಎಂ ( ಅಸಿಸ್ಟೆಂಟ್ ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್) ತನಿಖೆಗೆ ಸೂಚಿಸಿದ್ದಾರೆ.
PublicNext
26/01/2022 03:24 pm