ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ದಿ ಕಾಶ್ಮೀರ್ ಫೈಲ್ಸ್' ನಿರ್ದೇಶಕ ಅಗ್ನಿಹೋತ್ರಿ ವಿರುದ್ಧ ದೂರು ದಾಖಲು

ಮುಂಬೈ: ಭೋಪಾಲಿ ಎಂದರೆ ಸಲಿಂಗಕಾಮಿಗಳು ಎಂದು ಹೇಳುವ ಮೂಲಕ ಭೋಪಾಲಿಗಳನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ 'ದಿ ಕಾಶ್ಮೀರ್ ಫೈಲ್ಸ್' ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ವಿರುದ್ಧ ಪ್ರಕರಣ ದಾಖಲಾಗಿದೆ.

ಪತ್ರಕರ್ತ ಹಾಗೂ ಸೆಲೆಬ್ರಿಟಿ ರಿಲೇಷನ್ ಮ್ಯಾನೇಜರ್ ರೋಹಿತ್ ಪಾಂಡೆ ಅವರು ಮುಂಬೈನ ಪೊಲೀಸ್ ಠಾಣೆಯೊಂದರಲ್ಲಿ ತಮ್ಮ ವಕೀಲ ಕಾಶಿಫ್ ಖಾನ್ ದೇಶಮುಖ್ ಮೂಲಕ ದೂರು ನೀಡಿದ್ದಾರೆ. ಮಾನನಷ್ಟ ಹಾಗೂ ಇತರ ಆರೋಪಗಳ ಆಧಾರಿತವಾಗಿ ಅಗ್ನಿಹೋತ್ರಿ ಮೇಲೆ ಎಫ್ಐಆರ್ ದಾಖಲಿಸುವಂತೆ ರೋಹಿತ್ ಪಾಂಡೆ ಕೋರಿದ್ದಾರೆ.

ಕಾಶ್ಮೀರ್ ಫೈಲ್ಸ್ ನಿರ್ದೇಶಕ ಅಗ್ನಿಹೋತ್ರಿ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ '' ಭೋಪಾಲಿಗಳು ಸ್ವ ಇಚ್ಚೆಯಿಂದ, ಉದ್ದೇಶಪೂರ್ವಕವಾಗಿ ಸಲಿಂಗಕಾಮಿಗಳು ಎಂದು ಕರೆಯುವ ಮೂಲಕ ಭೋಪಾಲಿಗರನ್ನು ಅವಮಾನಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ನಿರ್ದೇಶಕ ಅಗ್ನಿಹೋತ್ರಿ ವಿರುದ್ಧ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಸೆಕ್ಷನ್ 153 ಎ ಮತ್ತು ಬಿ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲು ಕೋರಿದ್ದಾರೆ.

Edited By : Nagaraj Tulugeri
PublicNext

PublicNext

27/03/2022 07:32 am

Cinque Terre

58.87 K

Cinque Terre

9

ಸಂಬಂಧಿತ ಸುದ್ದಿ