ಚೆನ್ನೈ: 'ಇದು ನಮ್ಮ ಸುಪ್ರೀಂ ಲೀಡರ್‌ನಿಂದ ಸ್ಫೂರ್ತಿಗೊಂಡು ಇದನ್ನು ಧರಿಸಿದ್ದೇನೆ. ಹಾಯ್ ಗಯ್ಸ್, ಇದನ್ನು ನೀವೂ ಯಾಕೆ ಪ್ರಯತ್ನಿಸಬಾರದು?
ಹೀಗೆ ಹೇಳುವ ಮೂಲಕ ಬಹುಭಾಷಾ ನಟ ಹಾಗೂ ನಿರ್ಮಾಪಕ ಪ್ರಕಾಶ್ ರಾಜ್ ಅವರು ಮತ್ತೊಮ್ಮೆ ಪ್ರಧಾನಿ ಮೋದಿ ಅವರ ಬಗ್ಗೆ ಪರೋಕ್ಷವಾಗಿ ವ್ಯಂಗ್ಯವಾಡಿದ್ದಾರೆ. ಹೊಸ ವೇಷ ಧರಿಸಿರುವ ಫೋಟೋವನ್ನು ಪೋಸ್ಟ್ ಮಾಡಿ ಟ್ವೀಟ್ ಮೂಲಕ ಪ್ರಧಾನಿಯನ್ನು ಅಣಕಿಸಿದ್ದಾರೆ.
ಸ್ಥಳೀಯ ಸಾಂಪ್ರದಾಯಿಕ ಉಡುಗೆಯಲ್ಲಿ ಕ್ಯಾಮೆರಾಗೆ ಪೋಸ್ ನೀಡಿರುವ ಎರಡು ಫೋಟೋಗಳನ್ನು ಟ್ವಿಟರ್ನಲ್ಲಿ ಪ್ರಕಾಶ್ ರಾಜ್ ಅವರು ಅಪ್ಲೋಡ್ ಮಾಡಿದ್ದಾರೆ. ಒಂದು ಫೋಟೋದಲ್ಲಿ ರಾಜಕಾರಣಿಗಳ ಶೈಲಿಯಲ್ಲಿ ಕೈಬೀಸುತ್ತಿರುವುದನ್ನು ಕಾಣಬಹುದಾಗಿದೆ. ಪ್ರಕಾಶ್ ರಾಜ್ ಮಾಡಿದ ಈ ಟ್ವೀಟ್ ಬಗ್ಗೆ ಸದ್ಯ ಪರ ವಿರೋಧದ ಚರ್ಚೆಗಳು ನಡೆಯುತ್ತಿವೆ.
PublicNext
19/05/2022 04:43 pm