ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇಶಕ್ಕಾಗಿ ಜೀವತ್ಯಾಗ ಮಾಡಿದವರ ಬಗ್ಗೆಯೂ ಸಿನಿಮಾ ಮಾಡಿ: ಖರ್ಗೆ

ಕಲಬುರಗಿ: ಕಾಶ್ಮೀರಿ ಪಂಡಿತರಿಗೆ ಅನ್ಯಾಯವಾಗಿದೆ ನಿಜ. ಅದನ್ನು ಸರಿಪಡಿಸಿ ಅವರಿಗೆ ಮನೆ, ಜಮೀನು ನೀಡಿ. ಅದು ಬಿಟ್ಟು ಪ್ರಚೋದನೆ ಮಾಡಬೇಡಿ. ದೇಶಕ್ಕಾಗಿ ಲಕ್ಷಾಂತರ ಜನ ಪ್ರಾಣ ಬಿಟ್ಟಿದ್ದಾರೆ ಅಂತವರ ಚಿತ್ರ ತೆಗೆಯಿರಿ ಎಂದು ಬಿಜೆಪಿ ವಿರುದ್ಧ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವನ್ನು ಖುದ್ದು ಪ್ರಧಾನಿ ನರೇಂದ್ರ ಮೋದಿಯೇ ಜನರನ್ನು ನೋಡಿ ಎಂದು ಹೇಳಿ ಪ್ರಚೋದಿಸುತ್ತಿದ್ದಾರೆ. ಆ ಚಿತ್ರ ತೆಗೆದ ಅಗ್ನಿಹೋತ್ರಿ ಅವರ ಪಕ್ಷದವರೆ ಆಗಿದ್ದಾರೆ. ಆ ಚಿತ್ರದ ಅನುಪಮ್ ಖೇರ್ ಪತ್ನಿ ಬಿಜೆಪಿಯಲ್ಲಿದ್ದಾರೆ. ಬಿಜೆಪಿಯ ಸಭೆಯಲ್ಲಿ ಚಿತ್ರ ನೋಡಲು ಹೇಳಲಾಗಿದೆ. ನಾವು ಜೈಹಿಂದ್ ಅಂದ್ರೆ ಅವರು ಬೇರೇನೇ ಹೇಳ್ತಾರೆ. 2024ರವರೆಗೆ ಇಂತಹ ಹಲವು ಚಿತ್ರಗಳು ಬರುತ್ತಲೇ ಇರುತ್ತವೆ. ನಾನು ಕಾಶ್ಮೀರ್ ಫೈಲ್ಸ್ ಚಿತ್ರ ನೋಡಿಲ್ಲ, ಮೋದಿ ನೋಡಿ ಎಂದು ಹೇಳಿಲ್ಲ ಎಂದು ಕಿಡಿಕಾರಿದರು. ಯಾರು ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡ್ತಾರೆ. ಅವರಿಂದ ನಾವು ಉತ್ತಮ ರಾಜಕಾರಣ ನೀರಿಕ್ಷಿಸಲು ಆಗಲ್ಲ. ಈ ಹಿಂದಿನ ಯಾವ ರಾಜಕಾರಣಿಯೂ ಹೀಗೆ ಮಾಡಿರಲಿಲ್ಲ. ಆದ್ರೆ ಸದ್ಯ ಧರ್ಮದ ಮೇಲೆ ಜನರನ್ನು ಪ್ರಚೋದಿಸಲಾಗುತ್ತಿದೆ ಎಂದು ಗುಡುಗಿದರು.

Edited By : Nagaraj Tulugeri
PublicNext

PublicNext

18/03/2022 07:44 pm

Cinque Terre

68.43 K

Cinque Terre

35

ಸಂಬಂಧಿತ ಸುದ್ದಿ