ಬೆಂಗಳೂರು:- "ದಿ ಕಾಶ್ಮೀರ ಫೈಲ್ಸ್' ಸಿನಿಮಾ ತೆಗೆದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮತ್ತವರ ತಂಡಕ್ಕೆ ಯಶಸ್ಸಾಗಲಿ. ಕಾಶ್ಮೀರ ಕಣಿವೆಯಲ್ಲಿ ಕಾಶ್ಮೀರಿ ಪಂಡಿತರ ರಕ್ತಸಿಕ್ತ ಕರುಣಾಜನ, ಪ್ರಾಮಾಣಿಕ ಸ್ಥಿತ್ಯಂತರ ಸಹಜವಾಗಿ ಚಿತ್ರದಲ್ಲಿ ಮೂಡಿ ಬಂದಿದೆ. ಕಾಶ್ಮೀರ ಪಂಡಿತರು ತಾಯ್ನೆಲ ತೊರೆದು ಸದ್ಯ ನಿರಾಶ್ರಿತರರಾಗಿರುವುದು ಬೇಸರದ ವಿಷಯ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನ ಒರಾಯನ್ ಮಾಲ್‌ನ ಪಿವಿಆರ್‌ನಲ್ಲಿ ಕಾಶ್ಮೀರಿ ಫೈಲ್ಸ್ ಸಿನಿಮಾ ವೀಕ್ಷಿಸಿದ ಅವರು ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತು ಹೇಳಿದ್ದಾರೆ. ರಾಜ್ಯದಲ್ಲೂ ಈ ಸಿನಿಮಾ ಶೇ 100ರಷ್ಟು ತೆರಿಗೆ ವಿನಾಯಿತಿ ನೀಡಲಾಗುವುದು ಎಂದರು. ತುಂಬಾ ಒಳ್ಳೆಯ ಚಿತ್ರ. ಎಲ್ಲರೂ ನೋಡಿ ಎಂದು ತಮ್ಮ ಅಭಿಲಾಷೆ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳ ಜೊತೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಚಿವ ಮುನಿರತ್ನ, ಚಿತ್ರನಟ ಪ್ರಕಾಶ್ ಬೆಳವಾಡಿ ಮತ್ತಿರರು ಸಿನಿಮಾ ವೀಕ್ಷಿಸಿದರು. ಮಾರ್ಚ್ 8ಕ್ಕೆ ರಿಲೀಸ್ ಆದ "ದಿ ಕಾಶ್ಮೀರಿ ಫೈಲ್ಸ್" ಚಿತ್ರ ದೇಶಾದ್ಯಂತ ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ಹರ್ಯಾಣ ಸರ್ಕಾರ ಈಗಾಗಲೇ ಚಿತ್ರಕ್ಕೆ 100 % ತೆರಿಗೆ ವಿನಾಯಿತಿ ಘೋಷಿಸಿ, ಉತ್ತಮ ಕಥಾಹಂದರದ ಚಿತ್ರಕ್ಕೆ ಬೆಂಬಲ ಘೋಷಿಸಿದೆ. ಇದೀಗ ಕರ್ನಾಟಕ ಸರ್ಕಾರವೂ ರಾಜ್ಯದಲ್ಲಿ 100% ತೆರಿಗೆ ವಿನಾಯಿತಿ ಘೋಷಿಸಿ ತಮ್ಮ ಬೆಂಬಲ ವ್ಯಕ್ತಪಡಿಸಿದೆ. ಜನರು ಉತ್ತಮ ಚಿತ್ರವನ್ನು ಬೆಂಬಲಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದರು.
PublicNext
13/03/2022 11:15 pm