ಪಂಜಾಬ್: ಬಾಲಿವುಡ್ ಖಳನಾಯಕ ನಟ ಸೋನು ಸೂದ್ ಸಹೋದರಿ ಮಾಳ್ವಿಕಾ ಸೂದ್ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ವಿಧಾನಸಭಾ ಚುನಾವಣೆ ಮುಂಚೇನೆ ಮಾಳ್ವಿಕಾ ಸೂದ್ ಕಾಂಗ್ರೆಸ್ ಪಕ್ಷ ಸೇರಿರೋದು ಈಗ ಗಮನ ಸೆಳೆಯುತ್ತಿದೆ.
ಸೋನು ಸೂದ್ ಕೂಡ ಕಾಂಗ್ರೆಸ್ ಪಕ್ಷವನ್ನ ಸೇರ್ತಾರಾ ಅನ್ನೋ ಪ್ರಶ್ನೆ ಇದೆ. ಸೋನು ಸೂದ್ ಸಹೋದರಿ ಮಾಳ್ವಿಕಾ ಸೂದ್ ಇವತ್ತು ತಮ್ಮ ಸ್ವಗ್ರಾಮ ಮೊಗಾದಲ್ಲಿ ಕಾಂಗ್ರೆಸ್ ಪಕ್ಷ ಸೇರಿದ್ದಾರೆ.
ಈ ಹಿಂದೇನೆ ನಟ ಸೋನು ಸೂದ್ ತಮ್ಮ ಸಹೋದರಿ ರಾಜಕೀಯ ಪಕ್ಷ ಸೇರಲಿದ್ದಾರೆ ಅಂತಲೇ ಹೇಳಿಕೊಂಡಿದ್ದರು. ಅದರಂತೆ ಪಂಜಾಬ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ನೇತೃತ್ವದಲ್ಲಿಯೇ ಪಕ್ಷ ಸೇರಿದಂತಿದೆ. ಅದಕ್ಕೆ ಸಾಕ್ಷಿ ಎಂಬಂತೆ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
PublicNext
10/01/2022 06:09 pm