ಬೆಂಗಳೂರು: ಪುನೀತ್ ಸಾವು ಇಡೀ ನಾಡನ್ನ ನೋವಿನ ಕಡಲಿಗೆ ನೂಕಿದೆ. ಇಡೀ ರಾಜ್ಯದ ರಾಜಕೀಯ ಮುಖಂಡರೂ ಈ ದು:ಖದಲ್ಲಿ ಭಾಗಿ ಆಗಿದ್ದಾರೆ. ಪಕ್ಷ ಬೇದ ಮರೆತು ಉಪ ಚುನಾವಣೆಯ ಆ ಕಿತ್ತಾಟ ಬಿಟ್ಟು, ಪುನೀತ್ ಗಾಗಿಯೇ ಎಲ್ಲರೂ ಒಂದಾಗಿದ್ದಾರೆ. ಹೌದು. ಪುನೀತ್ ಸಾವಿನ ಸುದ್ದಿ ತಿಳಿಯುತ್ತಿದಂತೇನೆ ರಾಜಕೀಯ ನಾಯಕರು ಪುನೀತ್ ಅಂತಿಮ ದರುಶನ ಪಡೆಯೋಕೆ ಬಂದೇ ಬಿಟ್ಟಿದ್ದರು. ಕಾಂಗ್ರೆಸ್ ನ ಸಿದ್ಧರಾಮಯ್ಯನವ್ರು ಹಾಗೂ ಡಿ.ಕೆ.ಶಿವಕುಮಾರ್ ಆಗಮಿಸಿದ್ದರು. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇಲ್ಲಿಯೇ ಇದ್ದರು. ಇದರ ಜೊತೆಗೆ ಕಂಠೀರವ ಸ್ಟುಡಿಯೋದಲ್ಲಿ ಅಂತ್ಯ ಕ್ರಿಯೆ ಸಮಯದಲ್ಲಿ ಬಸವರಾಜ್ ಬೊಮ್ಮಾಯಿ, ಸಿದ್ಧರಾಮಯ್ಯ,ಡಿಕೆಶಿ ಹಾಗೂ ಬಿ.ಎಸ್.ಯಡಿಯೂರಪ್ಪ ಹೀಗೆ ಎಲ್ಲರೂ ಒಟ್ಟೊಟ್ಟಿಗೆ ಅಂತ್ಯಕ್ರಿಯೆಯಲ್ಲಿ ಭಾಗಿ ಆಗಿ ಅಂತಿಮ ನಮನ ಸಲ್ಲಿಸಿದರು.
PublicNext
31/10/2021 12:13 pm