ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾತೃವಿಯೋಗದಲ್ಲಿ ಅಕ್ಷಯ : ಪತ್ರ ಬರೆದು ಸಂತಾಪ ಸೂಚಿಸಿದ ಮೋದಿ

ನಟ ಅಕ್ಷಯ್ ಕುಮಾರ್ ಗೆ ಮಾತೃವಿಯೋಗ ಅಕ್ಷಯ್ ತಾಯಿ ಅರುಣಾ ಭಾಟಿಯಾ ಇತ್ತೀಚೆಗಷ್ಟೇ ನಿಧನರಾಗಿದ್ದರು. ಅವರ ನಿಧನಕ್ಕೆ ಪ್ರಧಾನಿ ನರೇಂದರ ಮೋದಿ ಸಂತಾಪ ಸೂಚಿಸಿದ ವಿಚಾರವನ್ನು ಅಕ್ಷಯ್ ಇದೀಗ ಬಹಿರಂಗಪಡಿಸಿದ್ದಾರೆ.

ಮೋದಿ ಕಳುಹಿಸಿದ ಪತ್ರವನ್ನು ಅವರು ಟ್ವಿಟರ್ ನಲ್ಲಿ ಹಂಚಿಕೊಂಡು, ದುಃಖದಲ್ಲಿ ಜೊತೆಯಾದ ಪ್ರಧಾನಿಗೆ ವಂದನೆ ಸಲ್ಲಿಸಿದ್ದಾರೆ. ಮೋದಿ ತಮ್ಮ ಪತ್ರದಲ್ಲಿ, ‘ಭಾರತೀಯ ಚಿತ್ರರಂಗದಲ್ಲಿ ಅಕ್ಷಯ್ ತಮ್ಮದೇ ಛಾಪು ಮೂಡಿಸಲು ದಶಕಗಳ ಕಾಲ ನಡೆಸಿದ ಹೋರಾಟ ನಡೆಸಿದ್ದಾರೆ. ಆ ಹೋರಾಟಕ್ಕೆ ಅವರ ಪೋಷಕರು ತುಂಬಿದ ಮೌಲ್ಯಗಳೇ ಕಾರಣ’ ಎಂದು ಅಕ್ಷಯ್ ಪೋಷಕರನ್ನು ಪ್ರಶಂಸಿಸಿದ್ದಾರೆ.

ಇನ್ನು ಪತ್ರವನ್ನು ಹಂಚಿಕೊಂಡಿರುವ ಅಕ್ಷಯ್, “ಅಮ್ಮನ ನಿಧನಕ್ಕೆ ಸಂತಾಪದ ಸಂದೇಶಗಳಿಂದ ವಿನಮ್ರನಾಗಿದ್ದೇನೆ, ಎಲ್ಲರಿಗೂ ಧನ್ಯವಾದಗಳು. ನನ್ನ ದಿವಂಗತ ಪೋಷಕರಿಗೆ ಆತ್ಮೀಯ ಭಾವನೆಗಳನ್ನು ವ್ಯಕ್ತಪಡಿಸಿದ ಈ ಅದ್ಭುತ ಸಂದೇಶಕ್ಕಾಗಿ ಗೌರವಾನ್ವಿತ ಪ್ರಧಾನ ಮಂತ್ರಿಗಳಿಗೆ ಕೃತಜ್ಞತೆಗಳು. ಈ ಸಮಾಧಾನಕರ ಮಾತುಗಳು ನನ್ನೊಂದಿಗೆ ಶಾಶ್ವತವಾಗಿ ಉಳಿಯುತ್ತವೆ. ಜೈ ಅಂಬೆ ” ಎಂದು ಅವರು ಬರೆದುಕೊಂಡು, ಮೋದಿ ಕಳುಹಿಸಿದ ಪತ್ರವನ್ನು ಪೋಸ್ಟ್ ಮಾಡಿ ಟ್ವೀಟ್ ಮಾಡಿದ್ದಾರೆ.

Edited By : Nirmala Aralikatti
PublicNext

PublicNext

12/09/2021 07:11 pm

Cinque Terre

62.37 K

Cinque Terre

1