ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿದ್ದರಾಮಯ್ಯನವರೇ ಸ್ವಾತಂತ್ರ್ಯ ಕೇವಲ ಕಾಂಗ್ರೆಸ್ಸಿನಿಂದ ಬಂದಿದ್ದಲ್ಲ: ಯಾರು ಹೀಗಂದಿದ್ದು?

ಬೆಂಗಳೂರು: 'ಸಿದ್ದರಾಮಯ್ಯ ಅವರೇ, ಈ ದೇಶಕ್ಕೆ ಕೇವಲ ಕಾಂಗ್ರೆಸ್ಸಿನಿಂದ ಸ್ವಾತಂತ್ರ್ಯ ಬಂದಿಲ್ಲ. ಬದಲಾಗಿ ಅನೇಕ ಕ್ರಾಂತಿಕಾರಿಗಳು, ಸಮಾಜವಾದಿಗಳು ಕೂಡ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರೆ' ಎಂದು ನಟ ಹಾಗೂ ಹೋರಾಟಗಾರ ಚೇತನ್ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಕಮ್ಯೂನಿಸ್ಟ್ ಗಳಾದ ಭಗತ್ ಸಿಂಗ್ ಅವರ ಜೀವನನ್ನು ಒತ್ತೆ ಇಟ್ಟರು, ವಿಮೋಚನೆಯ ನಾಯಕರಾದ ಅಂಬೇಡ್ಕರ್ ಮತ್ತು ಪೆರಿಯಾರ್ ಹೋರಾಡಿದರು, ಬೋಸ್ ಹಿಂದೂ ಮುಸ್ಲಿಂ ಏಕತೆಯನ್ನು ಉಳಿಸಿಕೊಂಡರು ಮತ್ತು ಸಮಾಜವಾದಿಗಳಾದ ಲೋಹಿಯಾ ಅವರು ಕೂಡಾ ಹೋರಾಡಿದ್ದರು ಎಂದು ಹೇಳಿದ್ದಾರೆ.

ಸಂಘ ಪರಿವಾರ ಯಾವುದರಲ್ಲೂ ಭಾಗವಹಿಸಲಿಲ್ಲ ಮತ್ತು ಕಾಂಗ್ರೆಸ್ ಎಲ್ಲಾ ಲಾಭಗಳನ್ನು ದೋಚಿಕೊಂಡಿತು. ಸಿದ್ದರಾಮಯ್ಯನವರೇ, ಸ್ವಾತಂತ್ರ್ಯ ಕೇವಲ ಕಾಂಗ್ರೆಸ್ಸಿನಿಂದ ಬಂದಿದಿಲ್ಲ ಎಂದು ಚೇತನ್ ತಿಳಿಸಿದ್ದಾರೆ.

Edited By : Nagaraj Tulugeri
PublicNext

PublicNext

11/09/2021 08:33 am

Cinque Terre

100.15 K

Cinque Terre

32

ಸಂಬಂಧಿತ ಸುದ್ದಿ