ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿಎಂ ಬೊಮ್ಮಾಯಿ ಭೇಟಿಯಾದ ಕಿಚ್ಚ

ನಟ ಕಿಚ್ಚ ಸುದೀಪ್ ಇಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಆಗಿದ್ದಾರೆ. ಇದು ಕೇವಲ ಅನೌಪಚಾರಿಕ ಭೇಟಿಯಷ್ಟೇ ಎನ್ನಲಾಗಿದೆ.

ಬಸವರಾಜ ಬೊಮ್ಮಾಯಿ ಹಾಗೂ ಸುದೀಪ್ ಮೊದಲಿನಿಂದಲೂ ಆಪ್ತರು. ಬಸವರಾಜ ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗ ಟ್ವೀಟ್ ಮಾಡಿದ್ದ ಸುದೀಪ್, ''ನಿಮ್ಮ ಸರಳತೆ ನೋಡಿ ಬೆಳೆದವನು ನಾನು. ನನ್ನ ಆರಂಭಿಕ ದಿನಗಳಲ್ಲಿ ನನಗೆ ಬೆಂಬಲವಾಗಿದ್ದವರು ನೀವು. ನಿಮಗೆ ಒಳ್ಳೆಯದಾಗಲಿ ಮಾಮ'' ಎಂದಿದ್ದರು. ಸುದೀಪ್ ಸಿನಿಮಾರಂಗ ಪ್ರವೇಶಿಸಿದ ಆರಂಭಿಕ ದಿನಗಳಲ್ಲಿ ಬಸವರಾಜ ಬೊಮ್ಮಾಯಿ ಅವರಿಗೆ ಬೆಂಬಲವಾಗಿದ್ದರು. ಹಾಗಾಗಿ ಬೊಮ್ಮಾಯಿ ಅವರೊಟ್ಟಿಗೆ ಸುದೀಪ್‌ಗೆ ಆತ್ಮೀಯತೆ. ಹಾಗಾಗಿಯೇ ಸಿಎಂ ಅವರನ್ನು ಮಾಮ ಎಂದು ಕರೆಯುವ ಸಲುಗೆ ಸುದೀಪ್‌ಗಿದೆ. ಈ ಭೇಟಿಯಲ್ಲಿ ಇಬ್ಬರೂ ಡಾ. ರಾಜ್ ಅವರ ಸಿನಿಮಾಗಳು ಹಾಗೂ ತಮ್ಮ ಸಿನಿಮಾಗಳ ಬಗ್ಗೆ ಕಿಚ್ಚ ಸುದೀಪ್ ಸಿಎಂ ಜೊತೆ ಚರ್ಚೆ ಮಾಡಿದ್ದಾರೆ.

Edited By : Nagaraj Tulugeri
PublicNext

PublicNext

31/08/2021 06:01 pm

Cinque Terre

67.09 K

Cinque Terre

1

ಸಂಬಂಧಿತ ಸುದ್ದಿ