ಬೆಂಗಳೂರು: ರೈತರ ಪಾಲಿಗೆ ಮರಣಶಾಸನವಾಗಿ ಪರಿಣಮಿಸಿರುವ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಜೊತೆ ಕುಳಿತು ಮಾತನಾಡಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ನಟ ಪ್ರಕಾಶ್ ರೈ ಮನವಿ ಮಾಡಿದ್ದಾರೆ.
ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿರುವ ಪ್ರಕಾಶ ರೈ #JustAsking #FarmersProstests #FarmLaws #WeUnitedForFarmers ಎಂಬ ಹ್ಯಾಷ್ ಟ್ಯಾಗ್ ಬಳಸಿದ್ದಾರೆ.
ಅಲ್ಲದೆ ಬಲವಂತವಾಗಿ ಹೇರಿರುವ ಕೃಷಿ ಕಾನೂನುಗಳನ್ನು ವಾಪಸ್ ಪಡೆಯಿರಿ. ರೈತರ ಜೊತೆ ಕುಳಿತು ಚರ್ಚೆ ಮಾಡಿ. ಅವರು ಏನು ಹೇಳುತ್ತಾರೆ ಎಂಬುದನ್ನು ಕೇಳಿ. ರೈತರ ಕಷ್ಟವನ್ನು ಅರಿಯಿರಿ. ವಾಸ್ತವವನ್ನು ತಿಳಿಯಿರಿ. ಈ ಮೂಲಕ ರೈತರ ವಿಶ್ವಾಸ ಗಳಿಸಿ ಎಂದು ಪ್ರಧಾನಿ ಮೋದಿಗೆ ನಟ ಪ್ರಕಾಶ್ ರೈ ಮನವಿ ಮಾಡಿದ್ದಾರೆ.
PublicNext
14/12/2020 01:45 pm