ಬೆಂಗಳೂರು : ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾದ ದಿನವೇ ಸಿ.ಟಿ.ರವಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಶನಿವಾರ ಬೆಳಗ್ಗೆ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ರವಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೈಗೊಂಡಿರುವ ಪ್ರಗತಿಯ ವರದಿ ಹಾಗೂ ಇನ್ನೂ ಬಾಕಿ ಉಳಿದಿರುವ ಕೆಲಸಗಳ ವಿವರಗಳನ್ನು ಒಳಗೊಂಡ ಪುಸ್ತಕದ ಜತೆಗೆ ರಾಜೀನಾಮೆ ಸಲ್ಲಿಸಿದರು.
ಆದರೆ ರಾಜೀನಾಮೆಯನ್ನು ಅಂಗೀಕರಿಸದ ಯಡಿಯೂರಪ್ಪ, ದಸರಾ, ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳು ಮುಗಿಯುವ ತನಕ ಮುಂದುವರಿಯುವಂತೆ ಸೂಚನೆ ನೀಡಿದರೆನ್ನಲಾಗಿದೆ.
ಅ.5-6ರಂದು ದೆಹಲಿಯಲ್ಲಿ ಬಿಜೆಪಿಯ ನೂತನ ಪದಾಧಿಕಾರಿಗಳ ಸಭೆ ನಡೆಯಲಿದೆ.
ಸಭೆ ಮುಗಿದ ನಂತರ ವರಿಷ್ಠರಿಂದ ಬರುವ ಸೂಚನೆಯನ್ನಾಧರಿಸಿ ರವಿ ರಾಜೀನಾಮೆಯ ಅಂಗೀಕಾರದ ಬಗ್ಗೆ ಸಿಎಂ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.
PublicNext
04/10/2020 07:26 am