ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೈತರನ್ನು ಮಾತುಕತೆಗೆ ಕರೆದ ರಾಜನಾಥ್ ಸಿಂಗ್

ನವದೆಹಲಿ : ಕೇಂದ್ರ ಸರ್ಕಾರ ಜಾರಿ ಮಾಡಿರುವ ಕೃಷಿ ಮಸೂದೆ ವಿರೋಧಿಸಿ ಅನ್ನದಾತರು ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ.

ಸದ್ಯ ರಕ್ಷಣಾ ಸಚಿವ ರಾಜನಾಥ್ ಸಿಂಗ್ 'ನೂತನ ಕೃಷಿ ಕಾಯ್ದೆಗಳ ಕುರಿತು ಚರ್ಚೆ ನಡೆಸಲು ಸರ್ಕಾರ ಸಿದ್ಧ. ಪ್ರತಿಭಟನೆ ಕೈಬಿಟ್ಟು ಮಾತುಕತೆಗೆ ಬನ್ನಿ' ಎಂದು ರೈತರಿಗೆ ಮನವಿ ಮಾಡಿದರು.

'ಕಾಯ್ದೆಗೆ ತರುವ ತಿದ್ದುಪಡಿಗಳು ರೈತರ ಹಿತಾಸಕ್ತಿಯನ್ನು ಕಾಪಾಡಬಲ್ಲವು ಎಂಬುದು ಮನವರಿಕೆಯಾದರೆ, ಆ ಕಾರ್ಯಕ್ಕೂ ಸರ್ಕಾರ ಸಿದ್ಧವಿದೆ' ಎಂದೂ ಅವರು ಭರವಸೆ ನೀಡಿದರು.

ಇಲ್ಲಿನ ದ್ವಾರಕಾದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಸ್ವತಃ ನಾನು ಒಬ್ಬ ರೈತನ ಮಗ. ರೈತರ ಕಷ್ಟಗಳ ಅರಿವಿದೆ. ಅಲ್ಲದೇ, ರೈತರ ಹಿತಾಸಕ್ತಿಗೆ ಧಕ್ಕೆ ತರುವ ಯಾವ ಕ್ರಮವನ್ನೂ ಮೋದಿ ನೇತೃತ್ವದ ಸರ್ಕಾರ ತೆಗೆದುಕೊಳ್ಳುವುದಿಲ್ಲ' ಎಂದರು.

'ಒಂದು-ಎರಡು ವರ್ಷಗಳ ಅವಧಿಗಾಗಿ ನೂತನ ಕಾಯ್ದೆಗಳನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುವುದು.

ಈ ಕಾಯ್ದೆಗಳ ಪ್ರಕಾರವೇ ಕೃಷಿ ಉತ್ಪನ್ನಗಳ ಮಾರಾಟ ಮಾಡಿ. ನಿಮಗೆ ಲಾಭವಾಗುವುದಿಲ್ಲ ಎಂದಾದರೆ, ಈ ಕಾಯ್ದೆಗಳಿಗೆ ಸೂಕ್ತ ತಿದ್ದುಪಡಿ ತರಲು ಸರ್ಕಾರ ಸಿದ್ಧ' ಎಂದು ಭರವಸೆ ನೀಡಿದರು.

Edited By : Nirmala Aralikatti
PublicNext

PublicNext

25/12/2020 03:20 pm

Cinque Terre

71.78 K

Cinque Terre

0

ಸಂಬಂಧಿತ ಸುದ್ದಿ