ಇಂದು ರೈತರ ದಿನ. ರೈತರಿಗೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ನಾನು ಊಟ ಮಾಡುತ್ತಿಲ್ಲ. ಅಂದರೆ ಮಧ್ಯಾಹ್ನದ ಊಟ ಮಾಡುತ್ತಿಲ್ಲ. 2020 ಆಗಸ್ಟ್ 9ರಿಂದ ರೈತರ ಕಾನೂನುಗಳನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದಕ್ಕೆ ಸರ್ಕಾರ ಸಕಾಲಕ್ಕೆ ಸ್ಪಂದಿಸಿಲ್ಲ ಎಂದು ಕಾಂಗ್ರೆಸ್ ನಾಯಕಿಯೂ ಆಗಿರುವ ನಟಿ ರಮ್ಯಾ ಟೀಕಿಸಿದ್ದಾರೆ.
ಈ ವಿಚಾರದಲ್ಲಿ ನರೇಂದ್ರ ಮೋದಿ ಸರ್ಕಾರ ದುರಂಹಕಾರ, ನಿರ್ದಾಕ್ಷಿಣ್ಯದಿಂದ ಕೂಡಿದೆ. ತನ್ನ ಉದ್ದಿಮೆದಾರ ಸ್ನೇಹಿತರಿಗೆ ಮಾತ್ರ ಅದು ಉಪಕಾರಿಯಾಗಿ ನಡೆದುಕೊಳ್ಳುತ್ತದೆ. ನರೇಂದ್ರ ಮೋದಿ ಸರ್ಕಾರ ಸೂಟ್‌ಬೂಟ್ ಸರ್ಕಾರದಂತೆ ಕೆಲಸ ಮಾಡುತ್ತಿದೆ' ಎಂದು ನಟಿ ರಮ್ಯಾ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿಸ್ ಹಾಕಿಕೊಂಡಿದ್ದಾರೆ.
ಇಂದು ದೇಶದಾದ್ಯಂತ 'ಕಿಸಾನ್ ದಿವಸ್' ಆಚರಿಸಲಾಗುತ್ತಿದೆ. ಇನ್ನೊಂದು ಕಡೆ ಕೆಲವು ದಿನಗಳಿಂದ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಸಮಾಜದಲ್ಲಿ ನಡೆಯುವ ಘಟನೆಗಳ ಬಗ್ಗೆ ಸದಾ ಅಭಿಪ್ರಾಯ ಹೊರಹಾಕುವ ನಟಿ ರಮ್ಯಾ ಅವರು ಇಂದು ಒಂದು ಹೊತ್ತಿನ ಊಟ ತ್ಯಾಗ ಮಾಡಲಿದ್ದಾರಂತೆ. ಅದರ ಜೊತೆ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ವಿರೋಧ ಮಾಡಿದ್ದಾರೆ.
PublicNext
23/12/2020 01:07 pm