ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಳ್ಳಿ ಫೈಟ್ : ತೋಟದಲ್ಲಿ ಬಾಡೂಟ, ಜನ ಎಸ್ಕೇಫ್ ಬಾಣಸಿಗ ವಶಕ್ಕೆ

ಶಿವಮೊಗ್ಗ : ರಾಜ್ಯದಲ್ಲಿ 2 ಹಂತದಲ್ಲಿ ಗ್ರಾ.ಪಂ.ಚುನಾವಣೆ ನಡೆಯುತ್ತಿದೆ. ಇಂದು ಮೊದಲ ಹಂತದ ಚುನಾವಣೆಗೆ ಮತದಾನವೂ ಆರಂಭವಾಗಿದೆ.

ಇದರ ಮಧ್ಯೆ ತಾಲೂಕಿನ ಹೊಸಹಳ್ಳಿ ಗ್ರಾಮದ ಅಡಿಕೆ ತೋಟದಲ್ಲಿ ಮತದಾರರಿಗೆ ನಾಜ್ ವೆಜ್ ಊಟದ ವ್ಯವಸ್ಥೆ ಮಾಡಿದ್ದ ಸ್ಥಳಕ್ಕೆ ಮಂಗಳವಾರ ಬೆಳಗ್ಗೆ ಮಾದರಿ ನೀತಿ ಸಂಹಿತೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಅಡಿಕೆ ತೋಟದಲ್ಲಿಯ ಕೋಳಿ ಫಾರಂ ನಲ್ಲಿ ಅಭ್ಯರ್ಥಿಯ ಪರ ಮತ ಚಲಾಯಿಸಿದವರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.

ಈ ಬಗ್ಗೆ ದೂರು ಬಂದಿದ್ದೇ ನೀತಿ ಸಂಹಿತೆ ಜಾರಿ ಅಧಿಕಾರಿ ಎನ್.ಚಂದ್ರಪ್ಪ, ಇಒ ಕಲ್ಲಪ್ಪ ದಾಳಿ ನಡೆಸಿದ್ದಾರೆ.

ನೀತಿ ಸಂಹಿತೆ ಉಲ್ಲಂಘಿಸಿದ ಅಭ್ಯರ್ಥಿಯ ಬಗ್ಗೆ ಇದುವರೆಗೆ ಮಾಹಿತಿ ಲಭ್ಯವಾಗಿಲ್ಲ. ಅಧಿಕಾರಿಗಳ ತಂಡ ದಾಳಿ ಮಾಡುತ್ತಿದ್ದಂತೆಯೇ ಸ್ಥಳದಲ್ಲಿದ್ದವರು ಪರಾರಿಯಾಗಿದ್ದಾರೆ.

ಅಡುಗೆ ಮಾಡುವವ(ಬಾಣಸಿಗ)ನನ್ನು ಸಿಕ್ಕಿದ್ದು, ಆತನನ್ನು ವಶಕ್ಕೆ ಪಡೆಯಲಾಗಿದೆ.

Edited By : Nirmala Aralikatti
PublicNext

PublicNext

22/12/2020 12:59 pm

Cinque Terre

43.35 K

Cinque Terre

2

ಸಂಬಂಧಿತ ಸುದ್ದಿ