ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿರುವ ಗ್ರಾಮ ಪಂಚಾಯಿತಿ ಚುನಾವಣೆಯ ಮೊದಲ ಹಂತ ರಾಜ್ಯದಲ್ಲಿ ಮಂಗಳವಾರ ನಡೆಯಲಿದೆ. ರಾಜ್ಯದ ಎಲ್ಲ30 ಜಿಲ್ಲೆಗಳಲ್ಲೂ ಆಯ್ದ ತಾಲೂಕುಗಳಲ್ಲಿ ಮತದಾನವಾಗಲಿದೆ. ರಾಜ್ಯ ಸರಕಾರ ಮತ್ತು ಚುನಾವಣಾ ಆಯೋಗ ಇದಕ್ಕೆ ಸರ್ವ ರೀತಿಯಲ್ಲೂ ಸಿದ್ಧತೆ ನಡೆಸಿದ್ದರೆ ಹಳ್ಳಿ ಹಳ್ಳಿಗಳಲ್ಲೂ ಉತ್ಸಾಹದ ವಾತಾವರಣ ಕಂಡುಬಂದಿದೆ.
ರಾಜ್ಯದಲ್ಲಿರುವ 226 ತಾಲೂಕುಗಳ ಪೈಕಿ 117 ತಾಲೂಕುಗಳ 3019 ಗ್ರಾಮ ಪಂಚಾಯಿತಿಗಳಲ್ಲಿ ಮತದಾನ ನಡೆಯಬೇಕಾಗಿದೆ. ಎರಡನೇ ಹಂತದ ಮತದಾನ ಡಿಸೆಂಬರ್ 27ರಂದು ನಡೆಯಲಿದೆ.
ಚುನಾವಣೆ ಕಾರ್ಯಕ್ಕಾಗಿ 5487 ಚುನಾವಣಾಧಿಕಾರಿಗಳು, 6085 ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದ್ದು, 2,70,268 ಮತಗಟ್ಟೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲಿದ್ದಾರೆ. ಪೊಲೀಸ್ ಇಲಾಖೆಯಿಂದ ಬಿಗಿ ಭದ್ರತೆ ಆಯೋಜಿಸಲಾಗಿದೆ.
PublicNext
21/12/2020 10:54 pm