ಬೆಳಗಾವಿ: ನಾವು ಸಾಬ್ರು ಹೊಸ ಕಾರು ತಗೋಳಲ್ಲ. ಗುಜರಿಯಲ್ಲಿ ಸಾಮಾನು ತಂದು ಕಾರು ಮಾಡ್ತೀವಿ ಎಂದು ಕಾಂಗ್ರೆಸ್ ನಾಯಕ ಸಿ.ಎಂ ಇಬ್ರಾಹಿಂ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ ತೊರೆಯುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು. ಸ್ವತಃ ಗಾಂಧೀಜಿ ಅವರೇ ಚುನಾವಣೆಗೆ ನಿಂತರೂ 5 ಕೋಟಿ ಬೇಕು. ನನ್ನದೇ ಆದ ಪಕ್ಷ ಕಟ್ಟುವಷ್ಟು ಶಕ್ತಿ ನನಗಿಲ್ಲ. ಅಷ್ಟು ದುಡ್ಡೂ ಇಲ್ಲ. ಗಾಂಧಿ ಚುನಾವಣೆಗೆ ನಿಂತಿದ್ದಾರೆ ಹೇಳೋಕೆ 5 ಕೋಟಿ ಬೇಕು. ಆ ಮಟ್ಟಿಗೆ ವ್ಯವಸ್ಥೆ ಹಾಳು ಮಾಡಿಟ್ಟಿದ್ದಾರೆ. ಇರೋ ವ್ಯವಸ್ಥೆ ನೋಡಿಕೊಳ್ಳಬೇಕು ಎಂದರು.
ಬಸವ ತತ್ವದ ಆಧಾರಿತವಾಗಿ ನಾನು ರಾಜಕಾರಣ ಮಾಡಿದ್ದೇನೆ. ಅಹಿಂದ ಮಾಡಿದಾಗಲೂ ನನ್ನದು ಬಸವ ತತ್ವ ಇತ್ತು. ಸದ್ಯ ನಮ್ಮಲ್ಲಿ ಎಲ್ಲರೂ ಉತ್ತಮರಿದ್ದಾರೆ. ಹೀಗಾಗಿ ನಾನು ಹೊಸ ಗಾಡಿ ತರೋದಿಲ್ಲ. ಗುಜರಿಯಲ್ಲಿ ಸಾಮಾನು ತಂದು ಒಳ್ಳೆ ಗೇರ್ ಬಾಕ್ಸ್, ಇಂಜಿನ್, ಬ್ರೇಕ್ ಸೇರಿಸಿ ಒಂದು ಗಾಡಿ ಮಾಡ್ತೀವಿ, ಉತ್ತಮರ ಸಂಘಕ್ಕೆ ನಮ್ಮ ಪ್ರಯತ್ನ ಎಂದರು
ಬಿಜೆಪಿ ಜೊತೆ ಮಾತುಕತೆ ಆಗಿದೆಯಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಎಲ್ಲಾದರೂ ಉಂಟೆ? ನಮ್ಮದು ಬಸವ ಕೃಪಾ ಅವರದು ಕೇಶವ ಕೃಪಾ. ನನಗೆ ಆರ್ ಎಸ್ ಎಸ್ ಅಂದ್ರೆ ಅಲರ್ಜಿ ಎಂದು ಉತ್ತರಿಸಿದರು.
PublicNext
18/12/2020 04:10 pm