ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಜೆಪಿಯವರು ಅಂಬಾನಿ, ಅದಾನಿಗಳನ್ನಷ್ಟೇ ಉದ್ಧಾರ ಮಾಡಿದ್ದಾರೆ: ಧೃವನಾರಾಯಣ

ನಂಜನಗೂಡು (ಮೈಸೂರು): ಧರ್ಮ ಮತ್ತು ಜಾತಿಗಳೇ ಬಿಜೆಪಿಯ ಅಜೆಂಡಾ. ಅದರ ಪ್ರಚೋದನೆಯಿಂದಲೇ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಅವರು ಅಧಿಕಾರಕ್ಕೆ ಬಂದಾಗಿನಿಂದ ಅಂಬಾನಿ, ಅದಾನಿಗಳನ್ನು ಉದ್ಧಾರ ಮಾಡಿದ್ದಾರೆ. ಹೊರತಾಗಿ ಬಡವರನ್ನು ಉದ್ಧಾರ ಮಾಡಿಲ್ಲ ಎಂದು ಕಾಂಗ್ರೆಸ್ಸಿನ ಮಾಜಿ ಸಂಸದ ಆರ್. ಧೃವನಾರಾಯಣ ಹೇಳಿದ್ದಾರೆ

ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆ, ಗುರುವಾರ ನಗರದ ಕನಕ ಭವನದಲ್ಲಿ ನಂಜನಗೂಡು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಪಕ್ಷದಿಂದ ಆಯೋಜಿಸಿದ್ದ ಗ್ರಾಮ ಜನಾಧಿಕಾರ ಸಭೆಯ ಉದ್ಘಾಟನೆ ಬಳಿಕ ಅವರು ಮಾತನಾಡಿದರು.

ಮಾನವ ಅಭಿವೃದ್ಧಿ ಸೂಚಕದಲ್ಲಿ ಭಾರತ ಕಳೆದ ವರ್ಷ 129ನೇ ಸ್ಥಾನದಲ್ಲಿತ್ತು. ಈ ವರ್ಷ 131ನೇ ಸ್ಥಾನದಲ್ಲಿದ್ದು, ಇನ್ನು ಈ ಹಿಂದೆ ಮನಮೋಹನ್‌ ಸಿಂಗ್‌ ಅಧಿಕಾರಾವಧಿಯಲ್ಲಿ ದೇಶದ ಹಸಿವಿನ ಪ್ರಮಾಣದಲ್ಲಿ 95ನೇ ಸ್ಥಾನದಲ್ಲಿದ್ದಾರೆ. ಈಗ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿ104ನೇ ಸ್ಥಾನಕ್ಕೆ ಜಿಗಿದಿದೆ. ಭಾರೀ ಪ್ರಮಾಣದಲ್ಲಿ ಗ್ಯಾಸ್‌, ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಕಂಡಿದ್ದು ಜನಸಾಮಾನ್ಯರ ಆದಾಯ ಹೆಚ್ಚಿಸಿ ಬಡ ಜನರ ಹಸಿವು ನೀಗಿಸಬೇಕಾದ ಪ್ರಧಾನಮಂತ್ರಿ ಬದಲಾಗಿ ಉದ್ಯಮಿಗಳ ವರಮಾನ ಹೆಚ್ಚಿಸಿದ್ದಾರೆ ಎಂದು ಟೀಕಿಸಿದರು.

Edited By : Nagaraj Tulugeri
PublicNext

PublicNext

18/12/2020 12:21 pm

Cinque Terre

78.91 K

Cinque Terre

23

ಸಂಬಂಧಿತ ಸುದ್ದಿ