ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿದ್ದರಾಮಯ್ಯ ದನಗಳ್ಳರ ಪರ ನಿಂತಿದ್ದಾರೆ: ಸಿ.ಟಿ ರವಿ

ಬೆಂಗಳೂರು: ಗೋ ಹತ್ಯೆ ನಿಷೇಧ ಕಾಯ್ದೆಯನ್ನು ವಿರೋಧಿಸುತ್ತಿರುವ ಸಿದ್ದರಾಮಯ್ಯ ಅವರು ಬಡವರ ಹಸು ಕದಿಯುವ ದನಗಳ್ಳರ ಪರ ಇದ್ದಾರೆ ಎಂದು ಸಚಿವ ಸಿಟಿ ರವಿ ಟೀಕಿಸಿದ್ದಾರೆ.

ಕಾಂಗ್ರೆಸ್ ಪಕ್ಷದವರಿಂದ ನಾವು ಪ್ರಜಾಪ್ರಭುತ್ವದ ಪಾಠ ಹೇಳಿಸಿಕೊಳ್ಳುವ ಅಗತ್ಯತೆ ಇಲ್ಲ. ಕಾಂಗ್ರೆಸ್ಸಿನವರು ಪ್ರತಿಯೊಂದಕ್ಕೂ ಸದನದ ಬಾವಿಗಳಿದು ಪ್ರತಿಭಟಿಸುವ ಮೂಲಕ ಕಲಾಪಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಪ್ರಜಾಪ್ರಭುತ್ವ ವಿರೋಧಿ ನೀತಿಯ ಬಗ್ಗೆ ರಾಜ್ಯದ ಜನತೆ ಗೊತ್ತಿದೆ ಎಂದಿದ್ದಾರೆ.

ಓಲೈಕೆ ರಾಜಕಾರಣದಿಂದಲೇ ಇವತ್ತು ದೇಶದಲ್ಲೆಡೆ ನಿಮ್ಮ ಪಕ್ಷವನ್ನು ಜನರು ಧೂಳಿಪಟ ಮಾಡಿದ್ದರೂ ನಿಮಗಿನ್ನೂ ಬುದ್ಧಿ ಬಂದಿಲ್ಲವೇ? ದನ ಸಾಕಿದ್ದೇನೆ, ಸಗಣಿ ಬಾಚಿದ್ದೇನೆ ಎಂದು ಹೇಳಿಕೊಳ್ಳುವ ನೀವು ದನಗಳ್ಳತನಕ್ಕೆ, ಅಕ್ರಮ ಗೋ ಹತ್ಯೆಗೆ ಬೆಂಬಲ ನೀಡುವುದು ನೈತಿಕ ರಾಜಕಾರಣವೇ ಎಂದು ಪ್ರಶ್ನಿಸಿದರು.

ನಮ್ಮದು ಮಹಾತ್ಮ ಗಾಂಧೀಜಿಯವರ ಪಕ್ಷ ಎನ್ನುತ್ತೀರಿ. ಅದೇ ಗಾಂಧೀಜಿಯವರು ನನಗೆ ಒಂದು ದಿನದ ಅಧಿಕಾರ ಸಿಕ್ಕರೂ ಗೋ ಹತ್ಯೆ ನಿಷೇಧ ಮಾಡುತ್ತೇನೆ ಎಂದಿದ್ದರು. ನಕಲಿ ಗಾಂಧೀಗಳ ನಾಯಕತ್ವದಲ್ಲಿರುವ ತಮಗೆ ಇದೆಲ್ಲ ಎಲ್ಲಿಂದ ನೆನಪಿಗೆ ಬರಬೇಕು? ಮಹಾತ್ಮ ಗಾಂಧೀಜಿಯವರ ಕನಸನ್ನು ನನಸಾಗಿಸುತ್ತಿರುವುದು ಭಾರತೀಯ ಜನತಾ ಪಕ್ಷ. ಕಾಂಗ್ರೆಸ್ ಪಕ್ಷ ನಕಲಿ ಗಾಂಧಿಗಳ ಜೊತೆಗೂಡಿ ಮಹಾತ್ಮರ ಕನಸಿಗೆ ಅಡ್ಡಿಪಡಿಸುತ್ತಿದ್ದೀರಿ. ಡಾ.ಬಾಬಾ ಸಾಹೇಬ್ ಅಂಬೇಡ್ಕರರ ಸಂವಿಧಾನದ ಆಶಯದಂತೆಯೇ ಗೋ ಹತ್ಯೆ ನಿಷೇಧ ಮಾಡಲು ಮುಂದಾದರೇ ಕಾಂಗ್ರೆಸ್ಸಿನ ವಿರೋಧ ಯಾತಕ್ಕಾಗಿ ಎಂದು ಸಿದ್ದರಾಮಯ್ಯಗೆ ಸಿ.ಟಿ. ರವಿ ಪ್ರಶ್ನಿಸಿದ್ದಾರೆ.

Edited By : Nagaraj Tulugeri
PublicNext

PublicNext

10/12/2020 04:43 pm

Cinque Terre

52.5 K

Cinque Terre

4

ಸಂಬಂಧಿತ ಸುದ್ದಿ