ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜೆಡಿಎಸ್ ಬೆಂಬಲದಿಂದ ಭೂ ಸುಧಾರಣಾ ತಿದ್ದುಪಡಿ ಕಾಯಿದೆ ಅಂಗೀಕಾರ: ಕಮಲ-ದಳ ಮೈತ್ರಿ ಮುನ್ಸೂಚನೆ!

ಬೆಂಗಳೂರು: ಕಾಂಗ್ರೆಸ್‌ ಪಕ್ಷದ ತೀವ್ರ ವಿರೋಧ ಹಾಗೂ ರೈತ ಸಂಘಟನೆಗಳ ಪ್ರತಿಭಟನೆ ನಡುವೆಯೇ ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ಮಸೂದೆಯನ್ನು ಮಂಗಳವಾರ ವಿಧಾನ ಪರಿಷತ್‌ನಲ್ಲೂ ಅಂಗೀಕರಿಸಲಾಯಿತು.

ಹೊಸ ಕೃಷಿ ವಿರೋಧಿಸಿ ಸಂಘಟನೆಗಳು ಕರೆ ನೀಡಿದ್ದ ಬಂದ್‌ಗೆ ಬೆಂಬಲ ನೀಡಿದ್ದ ಜೆಡಿಎಸ್ ಪಕ್ಷವೇ ಭೂ ಸುಧಾರಣಾ ಕಾಯಿದೆ ಅಂಗೀಕಾರವಾಗಲು ಸರಕಾರಕ್ಕೆ ಬೆಂಬಲ ನೀಡಿತು. ಜೆಡಿಎಸ್‌ನ ಈ ನಿರ್ಧಾರವು ಮತ್ತೆ ಮೈತ್ರಿಯ ಮುನ್ಸೂಚನೆಯೇ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಎದ್ದಿದೆ.

ಈ ಹಿಂದಿನ ಅಧಿವೇಶನದಲ್ಲಿ ಭೂ ಸುಧಾರಣಾ ತಿದ್ದುಪಡಿ ಮಸೂದೆಗೆ ವಿಧಾನ ಪರಿಷತ್ ಒಪ್ಪಿಗೆ ದೊರಕಿರಲಿಲ್ಲ. ಹೀಗಾಗಿ ಸೋಮವಾರ ಆರಂಭವಾದ ಅಧಿವೇಶನದಲ್ಲಿ ಕಂದಾಯ ಸಚಿವ ಆರ್. ಅಶೋಕ ಅವರು ಮತ್ತೆ ಪರಿಷ್ಕೃತ ಮಸೂದೆ ಮಂಡಿಸಿದ್ದರು. ಇಂದು ಮತಕ್ಕೆ ಹಾಕಲಾಯಿತು. ಈ ಕಾಯ್ದೆ ಅಂಗೀಕಾರಕ್ಕೆ ಬಿಜೆಪಿಗೆ ಜೆಡಿಎಸ್ ಬೆಂಬಲದೊಂದಿಗೆ 37 ಮತಗಳು ಕಾಯ್ದೆ ಅಂಗೀಕಾರದ ಪರವಾಗಿ ಚಲಾವಣೆಗೊಂಡವು. ಕಾಯ್ದೆಯ ವಿರೋಧವಾಗಿ 21 ಮತಗಳ ಚಲಾವಣೆಗೊಂಡವು.

Edited By : Vijay Kumar
PublicNext

PublicNext

08/12/2020 09:40 pm

Cinque Terre

82.91 K

Cinque Terre

6

ಸಂಬಂಧಿತ ಸುದ್ದಿ