ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಮರಾಠಿ ದ್ವೇಷ ಬಿಡಿ'– ಫೇಸ್‌ಬುಕ್‌ನಲ್ಲಿ ಕಾರಣ ಕೊಟ್ಟ ಯತ್ನಾಳ್

ಬೆಂಗಳೂರು: ಮರಾಠಿ ದ್ವೇಷ ಬಿಡಿ ಎಂದು ಹೇಳುವ ಮೂಲಕ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ಅವರು ಮರಾಠಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಜೊತೆಗೆ ಇದಕ್ಕೆ ಫೇಸ್‌ಬುಕ್‌ನಲ್ಲಿ ಕಾರಣವನ್ನು ಕೂಡ ನೀಡಿದ್ದಾರೆ.

ಪೋಸ್ಟ್‌ನಲ್ಲಿ ಏನಿದೆ?

ಮರಾಠರ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ನನ್ನ ಬೆಂಬಲ ಇದೆ. ಏಕೆಂದರೆ ಶೃಂಗೇರಿ ಮಠವನ್ನು ಟಿಪ್ಪು ಸುಲ್ತಾನನ ಅತಿಕ್ರಮಣದಿಂದ ಕಾಪಾಡಿದ್ದು ಮರಾಠರು. ಶ್ರೀರಂಗಪಟ್ಟಣಕ್ಕೆ ಟಿಪ್ಪು ಸುಲ್ತಾನ್ ಲೂಟಿ ಮಾಡಿ ಅಲ್ಲಿ ಇದ್ದ ಜನರನ್ನು ನಿರ್ದಯವಾಗಿ ಹತ್ಯೆ ಮಾಡುತ್ತಿದ್ದಾಗ ಆಗ ಮರಾಠರು ಬಂದು ಶ್ರೀರಂಗಪಟ್ಟಣವನ್ನು ಕಾಪಾಡಿದರು.

ಹೈದರಾಲಿ ಚಿತ್ರದುರ್ಗಕ್ಕೆ ಮುತ್ತಿಗೆ ಹಾಕಿದಾಗ ಆಗ ಮರಾಠರು ಬಂದು ಮದಕರಿ ನಾಯಕನಿಗೆ ಸಹಾಯಕ್ಕೆ ಧಾವಿಸುವಾಗ ಮಾರ್ಗ ಮಧ್ಯದಲ್ಲಿ ಹೈದರಾಲಿ ಸೈನಿಕರು ಮರಾಠ ಸೈನಿಕರನ್ನು ತಡೆದಿದ್ದಾರೆ ಹಾಗೂ ಮದಕರಿ ನಾಯಕನ ಸೇನೆಯಲ್ಲಿ ಇದ್ದ ಮುಸಲ್ಮಾನರು ಹೈದರಾಲಿ ಕಡೆಗೆ ಬಂದಿದ್ದಕ್ಕೆ ಅಲ್ಲಿ ಮೋಸ ಆಯಿತು. ಹೈದರಾಲಿ ಕುತಂತ್ರದಿಂದ ಜೈಲು ಪಾಲಾದ ರಾಜಮಾತೆಗೆ ಸಹಾಯ ಮಾಡಿದ್ದು ಮರಾಠರು ಹಾಗೂ ಮೈಸೂರು ರಾಜಮನೆತನಕ್ಕೆ ಮತ್ತೆ ಅಧಿಕಾರ ಸಿಗುವಂತೆ ಸಹಾಯ ಮಾಡಿದ್ದು ಮರಾಠರು.

ಟಿಪ್ಪು ಸುಲ್ತಾನ್ ಬೆಂಗಳೂರಿನಲ್ಲಿ ಪಾಳೆಯಗಾರರನ್ನು ಹತ್ಯೆ ಮಾಡುತ್ತಿದ್ದಾಗ ಆಗ ಮರಾಠರು ಬಂದು ಕಾಪಾಡಿದರು. ಧಾರವಾಡಕ್ಕೆ ಟಿಪ್ಪು ಸುಲ್ತಾನ್ ಮುತ್ತಿಗೆ ಹಾಕಿ ಅಲ್ಲಿ ಇದ್ದಬದ್ದ ಜನರನ್ನು ನಿರ್ದಯವಾಗಿ ಹತ್ಯೆ ಮಾಡುತ್ತಿದ್ದಾಗ ಆಗ ಮರಾಠರು ಬಂದು ಕಾಪಾಡಿದರು. ಟಿಪ್ಪು ಸುಲ್ತಾನ್ ಮದಕರಿ ನಾಯಕರು ಕಟ್ಟಿಸಿದ ಚಿತ್ರದುರ್ಗದ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಮಠಕ್ಕೆ ಮುತ್ತಿಗೆ ಹಾಕಿ ಆ ದೇವಸ್ಥಾನದ ಆವರಣದಲ್ಲಿ ಇರುವ ಒಂದು ವಿಗ್ರಹವನ್ನು ಧ್ವಂಸ ಮಾಡಿದ್ದಾನೆ ಹಾಗೂ ಮದಕರಿ ನಾಯಕ ನಿರ್ಮಿಸಿದ ನಾಯಕನಹಟ್ಟಿ ಕೆರೆಗೆ ವಿಷ ಹಾಕಿ ಅಲ್ಲಿ ಇದ್ದಬದ್ದ ಜನರನ್ನು ನಿರ್ದಯವಾಗಿ ಹತ್ಯೆ ಮಾಡುತ್ತಿದ್ದನು. ಆದರೆ ಈ ಸತ್ಯ ಬಹಳ ಜನರಿಗೆ ಗೊತ್ತಿರಲಿಕ್ಕಿಲ್ಲ. ಏಕೆಂದರೆ ಇತಿಹಾಸವನ್ನು ತಿರುಚಿ ಬರೆದ ಸುಳ್ಳು ಇತಿಹಾಸವನ್ನು ನಮ್ಮ ಜನರು ನಂಬಿದ್ದಾರೆ. ಇದು ನಮ್ಮ ದುರಂತ.

ಮುಂಬೈನ ಬೊರಿವಿಲಿಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇದೆ. ಅದಕ್ಕೆ ಮಹಾರಾಷ್ಟ್ರದ ಸರ್ಕಾರ ಅದಕ್ಕೆ ಹತ್ತು ಕೋಟಿ ಹಣ ನೀಡುತ್ತಿದೆ. ಇದನ್ನು ಅರ್ಥ ಮಾಡಿಕೊಳ್ಳಿ ಹಾಗೂ ಮರಾಠರ ಮೇಲೆ ಇರುವ ದ್ವೇಷ ಬಿಡಿ.

Edited By : Vijay Kumar
PublicNext

PublicNext

06/12/2020 08:25 am

Cinque Terre

84.77 K

Cinque Terre

8

ಸಂಬಂಧಿತ ಸುದ್ದಿ