ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶೀಘ್ರ BBMP ಚುನಾವಣೆ ನಡೆಸಿ : ಆಯೋಗಕ್ಕೆ ಕೋರ್ಟ್ ಆದೇಶ

ಬೆಂಗಳೂರು: ಮುಂದಿನ 6 ವಾರಗಳಲ್ಲಿ ಬಿಬಿಎಂಪಿಯ196 ವಾರ್ಡ್ ಗಳಿಗೆ ಚುನಾವಣೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ಆದೇಶ ನೀಡಿದೆ.

ಕಾಂಗ್ರೆಸ್ ನ ಮಾಜಿ ಕಾರ್ಪೊರೇಟರ್ ಎಂ. ಶಿವರಾಜ್ ಚುನಾವಣೆ ನಡೆಸುವಂತೆ ಕೋರಿ ಕೋರ್ಟ್ ಮೆಟ್ಟಿಲೇರಿದ್ದು ಕೋರ್ಟ್ ಅಸ್ತು ಎಂದಿದೆ.

ಶಿವರಾಜ್ ಅರ್ಜಿ ವಿಚಾರಣೆ ನಡೆಸಿದ ಸಿಜೆ ಎ.ಎಸ್ ಓಕಾ ನೇತೃತ್ವದ ವಿಭಾಗೀಯ ಪೀಠ ಮುಂದಿನ 6 ತಿಂಗಳೊಳಗೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡುವಂತೆ ಆಯೋಗಕ್ಕೆ ಆದೇಶಿಸಿದೆ.

ಒಂದು ತಿಂಗಳಲ್ಲಿ ಮೀಸಲಾತಿ ಅಧಿಸೂಚನೆ ಹೊರಡಿಸಿ, ಮೀಸಲಾತಿ ಆದೇಶ ಹೊರಡಿಸಿದ 6 ವಾರಗಳಲ್ಲಿ ಚುನಾವಣೆ ನಡೆಸಿ ಎಂದು ಕೋರ್ಟ್ ಹೇಳಿದೆ.

ಹೈಕೋರ್ಟ್ ಆದೇಶ ನೀಡಿದ ಹಿನ್ನೆಲೆಯಲ್ಲಿ ಮಾರ್ಚ್ ತಿಂಗಳಲ್ಲಿ ಬಿಬಿಎಂಪಿ ಚುನಾವಣೆ ನಡೆಯುವ ಸಾಧ್ಯತೆ ಇದೆ.

Edited By : Nirmala Aralikatti
PublicNext

PublicNext

04/12/2020 04:12 pm

Cinque Terre

179.11 K

Cinque Terre

1

ಸಂಬಂಧಿತ ಸುದ್ದಿ